ಸಾಂಕೇತಿಕ ಚಿತ್ರ 
ದೇಶ

ಹೈದರಾಬಾದ್ ಮೂಲದ ಐಐಟಿ ಪದವೀಧರ ಅಮೆರಿಕದಲ್ಲಿ ಸಾವು: ಆತ್ಮಹತ್ಯೆಯ ಶಂಕೆ

ಅಮೆರಿಕದ ಉತ್ತರ ಕ್ಯಾರೊಲಿನಾ ರಾಜ್ಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ತೆರಳಿದ್ದ ಹೈದರಾಬಾದ್ ಮೂಲದ ಐಐಟಿ...

ಹೈದರಾಬಾದ್: ಅಮೆರಿಕದ ಉತ್ತರ ಕ್ಯಾರೊಲಿನಾ ರಾಜ್ಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ತೆರಳಿದ್ದ ಹೈದರಾಬಾದ್ ಮೂಲದ ಐಐಟಿ ರ್ಯಾಂಕ್ ಪದವೀಧರ ಶಿವ ಕಿರಣ್ ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ತಮ್ಮ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ಶಿವ ಕಿರಣ್ ಮೃತದೇಹ ಪತ್ತೆಯಾಗಿದೆ. ಎಂಎಸ್ ಕೋರ್ಸ್ ನ ಸೆಮೆಸ್ಟರ್ ಪರೀಕ್ಷೆಯಲ್ಲಿ ಕಡಿಮೆ ಗ್ರೇಡ್ ಬಂತು ಎಂದು ಖಿನ್ನತೆಗೆ ಒಳಗಾಗಿದ್ದ ಕಿರಣ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಅವರು ಚೀನಾ ಮೂಲದ ಮತ್ತಿಬ್ಬರು ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ ರೂಂನಲ್ಲಿ ಉಳಿದುಕೊಂಡಿದ್ದರು.

ಕಿರಣ್ ಸಾಯುವುದಕ್ಕೆ ಮುನ್ನ ಯಾವುದೇ ಪತ್ರ ಬರೆದಿಟ್ಟಿರುವುದು ಗಮನಕ್ಕೆ ಬಂದಿಲ್ಲ. ಆದರೆ ಅವರು ಎರಡನೇ ಸೆಮಿಸ್ಟರ್ ಗೆ ಕಟ್ಟಿದ್ದ ಶುಲ್ಕವನ್ನು ವಾಪಸ್ಸು ಪಡೆದಿದ್ದರು. ಭಾರತದಲ್ಲಿರುವ ತಮ್ಮ ಮನೆಗೆ ಬಂದು ಮುಂದಿನ ಸೆಮಿಸ್ಟರ್ ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸಬೇಕೆಂದು ತಮ್ಮ ಕುಟುಂಬದವರಿಗೆ ಹೇಳಿದ್ದರು ಎಂದು ತಿಳಿದುಬಂದಿದೆ.

ಉತ್ತರ ಅಮೆರಿಕಾದ ತೆಲುಗು ಸಂಘಟನೆಯ ಅಧಿಕಾರಿಗಳಿಂದ ನಮಗೆ ದೂರವಾಣಿ ಕರೆ ಬಂತು. ಅವರು  ಶಿವ ಕಿರಣ್ ಹಾಸ್ಟೆಲ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ನಾವು ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿದೆ ಎಂದು  ಶಿವ ಕಿರಣ್  ಅವರ ಮಾವ ತಿಳಿಸಿದ್ದಾರೆ.

 ಶಿವ ಕಿರಣ್ ಹೈದರಾಬಾದಿನಲ್ಲಿ ಎಂಜಿನಿಯರಿಂಗ್ ಕೋರ್ಸ್ ಮುಗಿಸಿದ್ದರು. ಐಐಟಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದ್ದರು. ಕಳೆದ ವರ್ಷ ಆಗಸ್ಟ್ ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.  ಶಿವ ಕಿರಣ್ ಮೃತದೇಹಕ್ಕಾಗಿ ಅವರ ಕುಟುಂಬದವರು ಕಾಯುತ್ತಿದ್ದಾರೆ. ಕಿರಣ್ ತಂದೆ ಹೈದರಾಬಾದ್ ಸರ್ಕಾರದಲ್ಲಿ ಔಷಧಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

ಲೋಕಸಭಾ ಸ್ಥಾನಗಳ ಹೆಚ್ಚಳ ಪ್ರಸ್ತಾವನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ, ‘ದಿಕ್ಕು ತಪ್ಪಿಸುವ ಅಸ್ತ್ರ’; ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ, ಡೊನಾಲ್ಡ್ ಟ್ರಂಪ್!

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

ಹಾವೇರಿ ವಿಶ್ವವಿದ್ಯಾಲಯ: ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ನಕಾರ!

SCROLL FOR NEXT