ದೇಶ

ಮಾಲ್ಡಾ ಹಿಂಸಾಚಾರ ಕೋಮುಗಲಭೆಯಲ್ಲ: ಮಮತಾ ಬ್ಯಾನರ್ಜಿ

Rashmi Kasaragodu
ಕೊಲ್ಕತ್ತಾ: ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯ ಕೋಮು ವೈಷಮ್ಯ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವಾರಗಳ ಹಿಂದೆ ಮಾಲ್ಡಾ ಜಿಲ್ಲೆಯ ಕಾಲಿಯಾಚಾಕ್‌ನಲ್ಲಿ ಸ್ಥಳೀಯರು ಮತ್ತು ಬಿಎಸ್‌ಎಫ್ ನಡುವೆ ಸಂಘರ್ಷ ನಡೆದಿದ್ದು ಅದು ಕೋಮುಗಲಭೆ ಅಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ. 
ಇಲ್ಲಿ ನಡೆದಿರುವ ವಿಷಯವೇ ಬೇರೆ. ಬಿಎಸ್‌ಎಫ್ ಮತ್ತು ಸ್ಥಳೀಯರ ನಡುವೆ ನಡೆದ ಸಂಘರ್ಷಕ್ಕೆ ಇದು. ಈ ಬಗ್ಗೆ ರಾಜ್ಯ ಸರ್ಕಾರವಾಗಲೀ, ಪಕ್ಷ ಅಥವಾ ಜಿಲ್ಲಾಡಳಿತವಾಗಲೀ ಏನೂ ಮಾಡುವುದಕ್ಕೆ ಆಗಲ್ಲ. ನಾವು ಇಲ್ಲಿಯ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದೇವೆ.
ನಮ್ಮ ರಾಜ್ಯದಲ್ಲಿ ಶಾಂತಿಯುತವಾದ ವಾತಾವರಣವಿದೆ. ಇಲ್ಲಿ ಯಾವುದೇ ರೀತಿಯ ಕೋಮು ವೈಷಮ್ಯವಿಲ್ಲ ಎಂದು ಮಮತಾ ಹೇಳಿದ್ದಾರೆ.
ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಸಭೆಯ ಸಮಾರೋಪ ಸಮಾರಂಭದ ನಂತರ ಮಮತಾ ಮಾಧ್ಯಮದವರಲ್ಲಿ ಮಾತನಾಡಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮದೇ ಪಕ್ಷ ಗೆಲವು ಸಾಧಿಸಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಮಮತಾ ಆಶಾವಾದ ವ್ಯಕ್ತಪಡಿಸಿದ್ದಾರೆ.
SCROLL FOR NEXT