ಮುಂಬೈ: ಮುಂಬರುವ ಕೆಲವೇ ವರ್ಷಗಳಲ್ಲಿ ಪತಂಜಲಿ ಅಟ್ಟಾ ನೂಡಲ್ಸ್ ಮ್ಯಾಗಿ ನೂಡಲ್ಸ್‌ನ್ನು ಹಿಂದಿಕ್ಕಿ ನಂಬರ್ 1 ಬ್ರಾಂಡ್ ಆಗಲಿದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
ದೇಶದಲ್ಲಿನ ಟಾಪ್ ಬ್ರಾಂಡ್ ನೂಡಲ್ಸ್ ಸ್ಥಾನ ಪತಂಜಲಿ ಅಟ್ಟಾ ನೂಡಲ್ಸ್‌ಗೆ ಸಿಗಲಿದೆ. ಸದ್ಯ 100 ಟನ್ ಉತ್ಪಾದನೆ ಇರುವ ಪತಂಜಲಿ, ಮುಂಬರುವ ದಿನಗಳಲ್ಲಿ 300-500 ಟನ್ ಉತ್ಪಾದನೆಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ ಹೇಳಿದ್ದಾರೆ.
ಹಿಂದೂಸ್ತಾನ್ ಯುನಿಲಿವರ್ (ಹೆಚ್‌ಯುಎಲ್) ನ್ನು ಹಿಂದಿಕ್ಕಿ ನಮ್ಮ ಸ್ವದೇಶಿ ಎಫ್‌ಎಂಸಿಜಿ ಮುಂದೆ ಬರಲಿದೆ. ಈ ಎಲ್ಲ ಕಂಪನಿಗಳು ಹಣವನ್ನು ದೇಶದಿಂದ ಹೊರಗೆ ತೆಗೆದುಕೊಂಡು ಹೋಗುತ್ತಿವೆ ಎಂದು ರಾಮ್‌ದೇವ್ ಹೇಳಿದ್ದಾರೆ.
ಪತಂಜಲಿ ಈಗಗಲೇ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದು, ಕಡಿಮೆ ಬೆಲೆಗೆ ಉತ್ತಮ ಉತ್ಪನ್ನವನ್ನು ನೀಡುತ್ತಿದೆ. ಅದೇ ವೇಳೆ ಇದರಲ್ಲಿ ಬಂದ ಲಾಭದ ಹಣವನ್ನು ಸಮಾಜಸೇವೆಗೆ ಬಳಸಲಾಗುವುದು.
ಕಳೆದ 5 ವರ್ಷದಿಂದ ನಾನು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಇದರ ಪರಿಣಾಮ ಜನರಿಗೆ ವಾಸ್ತವ ಏನು ಎಂಬುದು ಗೊತ್ತಿದೆ. ನಮ್ಮ ದೇಶವೀಗ ವಂಶ ಪಾರಂಪರ್ಯದ ಆಡಳಿತದಿಂದ ಹೊರಬಂದು ಬದುಕಲು ಚಹಾ ಮಾರಿದವನ್ನು ಪ್ರಧಾನಿಯನ್ನಾಗಿ ಮಾಡಿದೆ. ಜನರ ಎಲ್ಲ ಆಸೆಗಳನ್ನು ಪೂರೈಸಲು ಸರ್ಕಾರಕ್ಕೆ ಒಂದಿಷ್ಟು ಕಾಲಾವಕಾಶ ಬೇಕಾಗುತ್ತದೆ ಮಾಧ್ಯಮದವರಲ್ಲಿ ಮಾತನಾಡಿದ ರಾಮ್‌ದೇವ್ ಹೇಳಿದ್ದಾರೆ.