ಶಿಲ್ಲಾಂಗ್: ಮೇಘಾಲಯದ ಪೂರ್ವ ಗಾರೋ ಹಿಲ್ಸ್ ಜಿಲ್ಲೆಯ ಮರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕ ಸ್ಫೋಟಿಸಿ ೯ ಮಂದಿ ಗಾಯಗೊಂಡಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ ಮತ್ತು ಇತರ ಪೊಲೀಸ್ ಸಿಬ್ಬಂದಿ ಜನರನ್ನು ತೆರವುಗೊಳಿಸಿದರು. ಮಾರುಕಟ್ಟೆ ಪ್ರದೇಶದಲ್ಲಿ ಇತರ ಸ್ಫೋಟಕಗಳು ಇವೆ ಎಂದು ಶೋಧ ಕಾಯಚರಣೆ ನಡೆಸಿದರು. ಸ್ಫೋಟದ ಪ್ರಭಾವದಿಂದಾಗಿ ಎರಡು ಅಂಗಡಿ ಮುಂಗಟ್ಟುಗಳಿಗೆ ಭಾರಿ ಹಾನಿಯಗಿದೆ. ಗಾರೋ ನ್ಯಾಷನಲ್ ಲಿಬರೇಷನ್ ಆರ್ಮಿ ಕೃತ್ಯದ ಹಿಂದೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.