ದೇಶ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವವರಿಗೆ ಶಿಕ್ಷೆ ತೀರ್ಮಾನ ಮಾಡಬೇಕಿರುವುದು ಪಾರ್ಲಿಮೆಂಟ್

Rashmi Kasaragodu
ನವದೆಹಲಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವವರಿಗೆ ಯಾವ ರೀತಿಯ ಶಿಕ್ಷೆ ನೀಡಬೇಕೆಂದು ತೀರ್ಮಾನಿಸುವ ಹಕ್ಕು ನ್ಯಾಯಾಲಯಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್  ಹೇಳಿದೆ. ಇಂಥಾ ವಿಷಯಗಳ ಬಗ್ಗೆ ಸಂಸತ್ತು ತೀರ್ಮಾನ ಕೈಗೊಳ್ಳಬೇಕು. ಈ ರೀತಿಯ ಪ್ರಕರಣಗಳಿಗೆ ಶಿಕ್ಷೆ ವಿಧಿಸುವ ಬಗ್ಗೆ ಕಾನೂನಿನಲ್ಲಿ ನಿಯಮಗಳಿನೆ. ಆದರೆ ಸಂತ್ರಸ್ತರ ವಯಸ್ಸಿಗೆ ಸಂಬಂಧಿಸಿದ ನಿಯಮಗಳಲ್ಲಿ ಸ್ಪಷ್ಟತೆ ಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವರ ಗುಪ್ತಾಂಗವನ್ನೇ ನಿಷ್ಕ್ರಿಯಗೊಳಸಬೇಕೆಂದು ಸುಪ್ರೀಂ ಕೋರ್ಟ್ ಮಹಿಳಾ ನ್ಯಾಯವಾದಿಗಳ ಸಂಘಟನೆ (SCWLA) ಅರ್ಜಿ ಸಲ್ಲಿಸಿತ್ತು. ಇಂಥಾ ಕೃತ್ಯವೆಸಗಿದವರ ಜನನಾಂಗವನ್ನೇ ನಿಷ್ಕ್ರಿಯಗೊಳಿಸಿದರೆ ಮಾತ್ರ ಅವರಿಗೆ ಶಿಕ್ಷೆ ನೀಡಿದಂತಾಗುವುದು ಎಂದು ಮಹಿಳಾ ನ್ಯಾಯವಾದಿಗಳ ಸಂಘಟನೆ ವಾದಿಸಿತ್ತು.
ಈ ಅರ್ಜಿ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಮಕ್ಕಳ ಮೇಲೆ ದೌರ್ಜನ್ಯವೆಸಗುವವರಿಗೆ ಕಠಿಣ ಶಿಕ್ಷೆ ನೀಡುವ ಬಗ್ಗೆ ಸಂಸತ್ ನಲ್ಲಿ ಚರ್ಚೆಯಾಗಬೇಕು ಎಂದಿದೆ. ಅಷ್ಟೇ ಅಲ್ಲದೆ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕೆಲವೊಂದು ಕಾನೂನುಗಳು ಇವೆ, ಹೀಗಿರುವಾಗ ಹೊಸತೊಂದು ಕಾನೂನು ರೂಪಿಸಿ ಎಂದು ನಾವು ಸಂಸತ್‌ಗೆ ಹೇಳುವುದಾದರೂ ಹೇಗೆ ಎಂದು ಪ್ರಶ್ನಿಸಿದೆ.
SCROLL FOR NEXT