ನವದೆಹಲಿ: ``ಲೋಕಸಭೆ ಚುನಾವಣೆಯಲ್ಲಿ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಸೋತಿರುವ ಅರುಣ್ ಜೇಟ್ಲಿ ಅವರಿಗೆ ರಕ್ಷಿಸಿಕೊಳ್ಳಲು ಮರ್ಯಾದೆಯಾದರೂ ಎಲ್ಲಿದೆ..?"
ಹೀಗೆಂದು ಹೇಳಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಡಿಡಿಸಿಎ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಜೇಟ್ಲಿ ಹೂಡಿರುವ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಕೇಜ್ರಿವಾಲ್, ತಾವು ಭಾರಿ ಸಾರ್ವಜನಿಕ ಮರ್ಯಾದೆ ಹೊಂದಿದ್ದೇನೆ ಎಂಬ ಜೇಟ್ಲಿವಾದ ಸಂಪೂರ್ಣ ಸುಳ್ಳುನಿಂದ ಕೂಡಿದೆ ಎಂದಿದ್ದಾರೆ.
"2014ರಲ್ಲಿ ಜೇಟ್ಲಿ ಅವರು ಅಮೃತಸರದಿಂದ ಬಿಜೆಪಿ ಅಭರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದರೂ, ಜೇಟ್ಲಿ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಸೋತರು. ಒಟ್ಟಿನಲ್ಲಿ ಭಾರತೀಯ ಪ್ರಜಾಸತ್ತೆಯು ಅವರಿಗೆ ಅಂತಹ ಮರ್ಯಾದೆಯನ್ನು ಕೊಡಲಿಲ್ಲ. ಡಿಡಿಸಿಎ ಪ್ರಕರಣ ಸಂಬಂಧ ಅವರ ಘನತೆಗೆ ಅವರು ಹೇಳಿಕೊಳ್ಳುವಂತೆ ಯಾವ ಹಾನಿಯೂ ಆಗಿಲ್ಲ. ನಾವು ಮಾಡಿರುವ ಆರೋಪವು ಅವರು ಅವರ ವೈಯುಕ್ತಿಕ ವ್ಯಕ್ತಿತ್ವಕ್ಕಂತೂ ಹಾನಿ ಮಾಡುವುದಿಲ್ಲ. ಹಾನಿ ಮಾಡುವುದಿದ್ದರೆ ಅದು ಅವರು ಸಾರ್ವಜನಿಕ ವರ್ಚಸ್ಸಿಗೆ" ಎಂದಿದ್ದಾರೆ ಕೇಜ್ರಿವಾಲ್.