ನವದೆಹಲಿ:ಪ್ರತಿಷ್ಠಿತ ಮನರಂಜನಾಕಾರ್ಯಕ್ರಮವೆಂದೇ ಹೆಸರು ಮಾಡಿರುವಕಾಮಿಡಿ ನೈಟ್ಸ್ ವಿತ್ ಕಪಿಲ್ಕಾರ್ಯಕ್ರಮದಲ್ಲಿ ಪ್ರಮುಖನಟರಾಗಿರುವ ಕಿಕು ಶಾರದ ಅವರನ್ನುಬುಧವಾರ ಬಂಧನಕ್ಕೊಳಪಡಿಸಲಾಗಿದೆ.
ಸ್ವಯಂ ಘೋಷಿತ ಬಾಬಾ ಹಾಗೂಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ರಾಮ್ ರಹೀಮ್ ಸಿಂಗ್ ಅವರ ಕುರಿತಂತೆಮಿಮಿಕ್ರಿ ಮಾಡಿ, ಧಾರ್ಮಿಕಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆಂದು ಕಿಕು ಶಾರದ ಅವರವಿರುದ್ಧ ದೂರು ದಾಖಲಾಗಿರುವಹಿನ್ನೆಲೆಯಲ್ಲಿ ಕಿಕು ಅವರನ್ನುಬಂಧನಕ್ಕೊಳಪಡಿಸಲಾಗಿದೆ ಎಂದುತಿಳಿದುಬಂದಿದೆ.
ಗುರ್ಮೀತ್ರಾಮ್ ರಹೀಮ್ ಸಿಂಗ್ ಅವರ ಶೈಲಿಹಾಗೂ ಹಾವಭಾವಗಳನ್ನು ಅನುಕರಿಸಿಕಿಕು ಶಾರದ ಅವರು ಮಿಮಿಕ್ರಿಯೊಂದನ್ನುಮಾಡಿದ್ದರು. ಇದರಕಾರ್ಯಕ್ರಮ ಕಳೆದ ವರ್ಷ ಡಿಸೆಂಬರ್ತಿಂಗಳಲ್ಲಿ ಖಾಸಗಿ ವಾಹಿನಿಯೊಂದರಲ್ಲಿಪ್ರಸಾರವಾಗಿತ್ತು. ಈಕಾರ್ಯಕ್ರಮ ಹಲವು ವಿವಾದಗಳನ್ನುಹುಟ್ಟುಹಾಕಿತ್ತು. ಕಾರ್ಯಕ್ರಮಪ್ರಸಾರದ ನಂತರ ಗುರ್ಮೀತ್ ಅವರಅನುಯಾಯಿಗಳು, ಕಿಕುಶಾರದಾ ಅವರು ಧಾರ್ಮಿಕ ಭಾವನೆಗಳಿಗೆಧಕ್ಕೆಯುಂಟು ಮಾಡಿದ್ದಾರೆಂದುಪ್ರಕರಣವೊಂದನ್ನು ದಾಖಲಿಸಿದ್ದರು.ನಂತರ ತಮ್ಮ ನಟನೆ ಕುರಿತಂತೆಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದಕಿಕು ಶಾರದ ಅವರು, ಯಾರಿಗೂನೋವುಂಟು ಮಾಡುವ ಹಾಗೂ ಭಾವನೆಗಳಿಗೆಧಕ್ಕೆಯುಂಟು ಮಾಡುವ ಉದ್ದೇಶನನ್ನದಾಗಿರಲಿಲ್ಲ. ನನ್ನಿಂದಯಾರಿಗಾದರೂ ನೋವಾಗಿದ್ದರೆ ಕ್ಷಮೆಕೋರುತ್ತೇನೆಂದು ಹೇಳಿಕೊಂಡಿದ್ದರು.ಬಾಬಾ ಅವರ ಅನುಯಾಯಿಗಳುಮುಂಬೈ ಪೊಲೀಸ್ ಠಾಣೆಯಲ್ಲಿದಾಖಲಿಸಿರುವ ಪ್ರಕರಣ ಕುರಿತಂತೆಕ್ರಮ ಕೈಗೊಂಡಿರುವ ಅಧಿಕಾರಿಗಳು,ಕಿಕು ಶಾರದಾ ಅವರನ್ನುಬಂಧನಕ್ಕೊಳಪಡಿಸಿದ್ದಾರೆ.
ಅಲ್ಲದೆ, ನ್ಯಾಯಾಲಯದಮುಂದೆ ಹಾಜರುಪಡಿಸಿದ್ದಾರೆ.ವಿಚಾರಣೆ ನಡೆಸಿರುವನ್ಯಾಯಾಧೀಶರು ಇದೀಗ ಕಿಕು ಶಾರದಅವರಿಗೆ 12 ದಿನಗಳ ಕಾಲನ್ಯಾಯಾಂಗ ಬಂಧನ ವಿಧಿಸಿದೆ ಎಂದುತಿಳಿದುಬಂದಿದೆ.