ದೇಶ

ಭಾರತದಲ್ಲಿ ಮುಸ್ಲಿಂ ಯುವಕರ ಸಂಖ್ಯೆ ಹೆಚ್ಚು: ಜನಗಣತಿ ವರದಿ

Shilpa D

ನವದೆಹಲಿ: ಭಾರತದಲ್ಲಿ ಎಲ್ಲ ಧರ್ಮದವರ ಪೈಕಿ ಮುಸ್ಲಿಮರು ಹೆಚ್ಚು ಮಕ್ಕಳು ಹಾಗು ಯುವಕರನ್ನು ಹೊಂದಿದ್ದಾರೆ ಎಂದು ಜನಗಣತಿ ತಿಳಿಸಿದೆ.

ಮಂಗಳವಾರ ಬಿಡುಗಡೆ ಆದ 2011 ಗಣತಿ ಪ್ರಕಾರ, ಹಿಂದೂ ಮಕ್ಕಳ ಸಂಖ್ಯೆ ಶೇ.40 ಆದರೆ, ಮುಸ್ಲಿಂ ಮಕ್ಕಳ ಸಂಖ್ಯೆ ಶೇ.47, ಜೈನ ಮಕ್ಕಳ ಸಂಖ್ಯೆ ಶೇ.29 ರಷ್ಟಿದೆ.

ಎಲ್ಲ ಸಮುದಾಯಗಳಲ್ಲಿರುವ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಶೇ.41. 60ಕ್ಕಿಂತ ಹೆಚ್ಚು ವಯಸ್ಸು, ಆದವರ ಸಂಖ್ಯೆ ಶೇ.9. ಇನ್ನು , 20-59 ವರ್ಷದವರ ಸಂಖ್ಯೆ ಶೇ. 50ರಷ್ಟಿದೆ.

ದೇಶದ ನಾನಾ ಸಮುದಾಯಗಳ ಒಟ್ಟಾರೆ ಚಿತ್ರಣದಲ್ಲಿ ಕಂಡು ಬಂದಿರುವ ಪ್ರಮುಖ ಅಂಶವೆಂದರೇ ಮಕ್ಕಳ ಸಂಖ್ಯೆ ಕ್ಷೀಣಿಸಿ, ವೃದ್ಧರ ಸಂಖ್ಯೆ ಹೆಚ್ಚಿದೆ. ಜತೆಗೆ, ನಾನಾ ಸಮುದಾಯದವರ ಜೀವಿತಾವಧಿಯಲ್ಲೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ.

2001ರ ಗಣತಿ ನಂತರ ಯುವ ಜನರ ಸಂಖ್ಯೆ ಕ್ಷೀಣಿಸುತ್ತಿದೆ. ಆಗ ಯುವ ಸಮುದಾಯದ ಒಟ್ಟು ಸಂಖ್ಯೆ ಶೇ.45ರಷ್ಟಿತ್ತು. ಈ ಪೈಕಿ ಹಿಂದೂಗಳು (ಶೇ.44), ಮುಸ್ಲಿಂ (ಶೇ.52), ಜೈನರು (ಶೇ.35). ಇದ್ದರು.

ಎಲ್ಲ ಸಮುದಾಯಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಳವಾಗಿದ್ದು, ಜೀವತಾವಧಿ ಹೆಚ್ಚಿರುವ ಅಂಶ ಗೊತ್ತಾಗಿದೆ. ಇದು ದೇಶದ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುವುದು.

SCROLL FOR NEXT