ಅಪಘಾತದಲ್ಲಿ ಐಎಎಫ್ ಅಧಿಕಾರಿ ಸಾವು (ಸಂಗ್ರಹ ಚಿತ್ರ) 
ದೇಶ

ಗಣರಾಜ್ಯೋತ್ಸವ ಪರೇಡ್ ತರಬೇತಿ ವೇಳೆ ಅಪಘಾತ; ಐಎಎಫ್ ಅಧಿಕಾರಿ ಸಾವು

ಗಣರಾಜ್ಯೋತ್ವ ದಿನಾಚರಣೆಯ ಸೈನಿಕರ ಪರೇಡ್ ಗಾಗಿ ತರಬೇತಿ ನಡುಸುತ್ತಿದ್ದ ವೇಳೆ ಭಾರತೀಯ ವಾಯು ಸೇನೆ ಅಧಿಕಾರಿಯೊಬ್ಬರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಬುಧವಾರ ಕೋಲ್ಕತಾದಲ್ಲಿ ನಡೆದಿದೆ...

ಕೋಲ್ಕತಾ: ಗಣರಾಜ್ಯೋತ್ವ ದಿನಾಚರಣೆಯ ಸೈನಿಕರ ಪರೇಡ್ ಗಾಗಿ ತರಬೇತಿ ನಡುಸುತ್ತಿದ್ದ ವೇಳೆ ಭಾರತೀಯ ವಾಯು ಸೇನೆ ಅಧಿಕಾರಿಯೊಬ್ಬರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ  ಬುಧವಾರ ಕೋಲ್ಕತಾದಲ್ಲಿ ನಡೆದಿದೆ.

ಸೈನಿಕರ ತರಬೇತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದ ವಾಯುಸೇನೆಯ ಅಧಿಕಾರಿ ಅಭಿಮನ್ಯು ಗೌಡ್ (30 ವರ್ಷ) ಅವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಸುಮಾರು  6.30ರ ವೇಳೆಯಲ್ಲಿ ಈ ಘಟನೆ ಸಂಭವಿಸಿದ್ದು, ಕೋಲ್ಕತಾದಲ್ಲಿ ಸೈನಿಕರ ಪರೇಡ್ ಮೇಲ್ವಿಚಾರಣೆ ಮಾಡುತ್ತಿದ್ದ ಅಭಿಮನ್ಯು ಅವರಿಗೆ ಖಾಸಗಿ ಕಾರೊಂದು ಗುದ್ದಿದೆ. ಗಂಭೀರವಾಗಿ ಗಾಯಗೊಂಡ  ಅಭಿಮನ್ಯು ಅವರನ್ನು ಕೂಡಲೇ ಸೈನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಕೋಲ್ಕತಾದ ಸೈನಿಕ ಪ್ರದೇಶದಲ್ಲಿ ಸೈನಿಕರು ಪರೇಡ್ ನಡೆಸುವಾಗ ಸಾರ್ವಜನಿಕ ಪ್ರವೇಶಕ್ಕೆ ಮತ್ತು ಖಾಸಗಿ ವಾಹನಗಳಿಗೆ ನಿರ್ಭಂಧ ಹೇರಿರಲಾಗಿರುತ್ತದೆ. ಆದರೆ  ನಿರ್ಭಂಧವಿದ್ದರೂ ಖಾಸಗಿ ಆಡಿಕಾರು ವೇಗವಾಗಿ ನುಗ್ಗಿದ್ದು, ಅಧಿಕಾರಿಗೆ ಢಿಕ್ಕಿ ಹೊಡೆದಿದೆ. ಪ್ರಸ್ತುತ ಆಡಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!