ದೇಶ

ಮಿಲ್ಟ್ರಿ ವೆಬ್ ಸೈಟ್ ನೋಡದಿರಿ!

Mainashree
ಬರೇಲಿ: ಭಾರತದ ರಕ್ಷಣಾ ಇಲಾಖೆಯ ವೆಬ್ ಸೈಟ್‍ಗೆ ವಿನಾ ಕಾರಣ ಪದೇ ಪದೆ ಭೇಟಿ ನೀಡುತ್ತಿದ್ದರೆ ನೀವು ತೊಂದರೆಗೆ ಸಿಲುಕಿಕೊಳ್ಳುವಿರಿ. ಪಠಾಣ್‍ಕೋಟ್ ಘಟನೆಯಿಂದ ಎಚ್ಚೆತ್ತುಕೊಂಡಿರುವ ಮಿಲಿಟರಿ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. 
ಘಟನೆ ಹಿನ್ನೆಲೆಯಲ್ಲಿ ಪಾಕ್‍ನಲ್ಲಿ ಸೆರೆಯಾಗಿರುವ ಉಗ್ರ ಏಜಾಜ್ ಭಾರತೀಯ ಸೇನಾವೆಬ್‍ಸೈಟ್‍ನಲ್ಲಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿ, ನಂತರವೇ ಪಠಾಣ್ ಕೋಟ್ ದಾಳಿ ಸಂಘಟಿಸಿದ್ದ ಎನ್ನಲಾಗಿದೆ. 
ಆದ್ದರಿಂದ ಇನ್ನು ಯಾರಾದರೂ, ಸೇನೆಯ ವೆಬ್‍ಸೈಟ್‍ಗೆ ಪದೇ ಪದೆ ಭೇಟಿ ನೀಡುತ್ತಿದ್ದರೆ ಅವರ ಮೇಲೆ ಸೇನೆಯ ಗುಪ್ತಚರ ವಿಭಾಗದ ಅಧಿಕಾರಿಗಳು ಕಣ್ಣಿಡಲಿದ್ದಾರೆ. ಅನುಮಾನ ಮೂಡಿದರೆ, ಅಂಥವರನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.
SCROLL FOR NEXT