ಮನೋಹರ್ ಪರ್ರಿಕರ್ 
ದೇಶ

ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ಪಾಕ್ ಗೆ ಭಾರತ ಎಚ್ಚರಿಕೆ

ಜ.2 ರ ಪಠಾಣ್‌ಕೋಟ್‌ ಹಾಗೂ 2008ರ ಮುಂಬೈ ದಾಳಿ ಪ್ರಕರಣದ ರೂವಾರಿಗಳ ವಿರುದ್ಧ ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದರಿಂದ ಭಾರತ ...

ಜೈಪುರ:  ಜ.2 ರ ಪಠಾಣ್‌ಕೋಟ್‌ ಹಾಗೂ 2008ರ ಮುಂಬೈ ದಾಳಿ ಪ್ರಕರಣದ ರೂವಾರಿಗಳ ವಿರುದ್ಧ ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದರಿಂದ ಭಾರತ ತಾಳ್ಮೆ ಕಳೆದುಕೊಳ್ಳುವಂತಾಗಿದೆ ಎಂದು ರಕ್ಷಣಾ ಸಚಿವ ಮನೋಹರ ಪರ್ರಿಕರ್‌ ಅವರು ಗುಡುಗಿದ್ದಾರೆ.

ಜೈಪುರದಲ್ಲಿ ಮಾತನಾಡಿದ ಅವರು ಭಾರತ ತಾಳ್ಮೆ ಕಳೆದುಕೊಂಡರೇ ಅದರ ಪರಿಣಾಮಗಳನ್ನು ಮುಂದಿನ ಒಂದು ವರ್ಷದಲ್ಲಿ ಇಡೀ ಜಗತ್ತು ನೋಡಲಿದೆ ಎಂದರು. ದಾಳಿಯಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ, ನಮ್ಮ ತಾಳ್ಮೆ ಮೀರಿದೆ. ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

'ರಕ್ಷಣ ಸಚಿವನಾಗಿ ನನ್ನ ತಾಳ್ಮೆಗೆ ಮಿತಿ ಇದೆ. ಇನ್ನೂ ಸಹಿಸಲಾಗದು. ಜೆಇಎಂ ಸಂಘಟನೆಯನ್ನು ಮಟ್ಟ ಹಾಕಿ ಅದರ ಸದಸ್ಯರನ್ನು ಪಾಕಿಸ್ತಾನ ಬಂಧಿಸಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಏನು ಮಾಡಬೇಕು ಎಂಬುದು ತಿಳಿದಿದೆ. ನಮ್ಮ ಸರದಿಗಾಗಿ ಕಾಯುತ್ತಿದ್ದೇವೆ. ದೇಶದ ಶತ್ರುಗಳನ್ನು ಹೇಗೆ ಮಟ್ಟ ಹಾಕಬೇಕೆಂದು ನಮಗೂ ತಿಳಿದಿದೆ. ಎಲ್ಲವನ್ನೂ ವಿವರಗಳನ್ನು ಹಂಚಿಕೊಳ್ಳಲಾಗದು.'ಎಂದಿದ್ದಾರೆ.

ಪಠಾಣ್ ಕೋಟ್ ದಾಳಿ ಸಂಬಂಧ ತನಿಖೆ ನಡೆಸಲು, ಪಾಕಿಸ್ತಾನ ಉನ್ನತ ಮಟ್ಟದ ತನಿಖಾ ತಂಡ ನೇಮಿಸಿದೆ. ಈ ತಂಡ ತನಿಖೆ ನಡೆಸಲು ಪಠಾಣ್ ಕೋಟ್ ಗೆ ಬಂದರೆ ವಾಯುನೆಲೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪರ್ರಿಕರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಧರ್ಮಸ್ಥಳ ಪ್ರಕರಣ: ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ SIT ಗೆ ಒತ್ತಾಯ!

ಮಂಗಳೂರು: KSRTC ಬಸ್ ಬ್ರೇಕ್ ಫೇಲ್; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು; Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

SCROLL FOR NEXT