ನವದೆಹಲಿ: ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನೆರೆ ಹೊರೆಯ ರಾಷ್ಟ್ರಗಳಿಗೆ ಭೇಟಿ ನೀಡಿ ವಿಶ್ವದ ಗಮನಸೆಳೆದಿದ್ದ ನರೇಂದ್ರ ಮೋದಿ, ಭಾರತ ಮಾತ್ರವಲ್ಲ, ವಿಶ್ವದ ಗಮನ ಸೆಳೆದ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ನರೇಂದ್ರ ಮೋದಿಗೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಟ್ವಿಟ್ಟರ್ ನಲ್ಲಿ ಫಾಲೋವರ್ಸ್ ಹೊಂದಿರುವವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದ ನರೇಂದ್ರ ಮೋದಿ ಎರಡನೇ ಸ್ಥಾನಕ್ಕೇರಿದ್ದಾರೆ.
ಶಾರುಖ್ ಖಾನ್ ಅವರಿಗೆ 17, 351, 100 ಫಾಲೋವರ್ಸ್ ಗಳು ಇದ್ದರೆ, ನರೇಂದ್ರ ಮೋದಿ ಅವರಿಗೆ 17, 371, 600ಕ್ಕೂ ಅಧಿಕ ಫಾಲೋವರ್ಸ್ ಗಳು ಇದ್ದಾರೆ ಎಂದು ಹೇಳಲಾಗಿದೆ. ಮೊದಲ ಸ್ಥಾನದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿದ್ದಾರೆ. ಬಿಗ್ ಬಿ ಗೆ ಬರೋಬ್ಬರಿ 18.9 ದಶಲಕ್ಷ ಫಾಲೋವರ್ಸ್ ಗಳಿದ್ದಾರೆ. ವಿಶ್ವದ ರಾಜಕಾರಣಿಗಳಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವವರ ಪಟ್ಟಿಯಲ್ಲಿ ಒಬಾಮಾ ಮೊದಲ ಸ್ಥಾನದಲ್ಲಿದ್ದಾರೆ.