ಪಿಎಸ್ ಎಲ್ ವಿ-ಸಿ 31ಕ್ಕಿಂತ ಮೊದಲು ಪಿಎಸ್ ಎಲ್ ವಿ-ಸಿ30 ಉಪಗ್ರಹ ಉಡಾವಣೆಯ ಸಂದರ್ಭದ ಚಿತ್ರ(ಸಂಗ್ರಹ) 
ದೇಶ

ಪಿಎಸ್ ಎಲ್ ವಿ-ಸಿ31 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ

ಪಿಎಸ್ಎಲ್ ವಿ-ಸಿ 31 ಉಪಗ್ರಹ ಉಡಾವಣೆಗೆ ಆಂಧ್ರಪ್ರದೇಶದ ಶ್ರೀಹರಿಕೋಟ ಉಡ್ಡಯನ ಕೇಂದ್ರದಲ್ಲಿ 48 ಗಂಟೆಗಳ...

ಶ್ರೀ ಹರಿಕೋಟ: ಪಿಎಸ್ಎಲ್ ವಿ-ಸಿ 31 ಉಪಗ್ರಹ ಉಡಾವಣೆಗೆ ಆಂಧ್ರಪ್ರದೇಶದ ಶ್ರೀಹರಿಕೋಟ ಉಡ್ಡಯನ ಕೇಂದ್ರದಲ್ಲಿ 48 ಗಂಟೆಗಳ ಕ್ಷಣಗಣನೆ ಆರಂಭವಾಗಿದೆ.

ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಇಸ್ರೋ ಆವರಣದಲ್ಲಿ ವಿಜ್ಞಾನಿಗಳು ಪರಿಶೀಲನೆ ನಡೆಸಿ ರಾಕೆಟ್ ಉಡಾವಣೆಗೆ ಪರಿಸ್ಥಿತಿ ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಭಾರತೀಯ ಪ್ರಾದೇಶಿಕ ನೌಕಾಯಾನಶಾಸ್ತ್ರ ಉಪಗ್ರಹ ವ್ಯವಸ್ಥೆ-1ಇ (ಐಆರ್ ಎನ್ ಎಸ್ ಎಸ್) ಯನ್ನು ಉಪಗ್ರಹ ಹೊತ್ತೊಯ್ಯಲಿದೆ.

ಇಸ್ರೋ ವಿಜ್ಞಾನಿಗಳು ನೌಕಾಯಾನ ವ್ಯವಸ್ಥೆಗೆ ಸಂಬಂಧಪಟ್ಟ ಏಳು ಸರಣಿ ಉಪಗ್ರಹಗಳನ್ನು ತಯಾರಿಸುತ್ತಿದ್ದು, ಅವುಗಳಲ್ಲಿ ನಾಡಿದ್ದು ಉಡ್ಡಯನಗೊಳ್ಳುವ ಉಪಗ್ರಹ ಐದನೆಯದ್ದು. ಈಗಾಗಲೇ ಅಂತರಿಕ್ಷದಲ್ಲಿ ಕಾರ್ಯಾಚರಣೆಯಲ್ಲಿರುವ ಇತರ ನಾಲ್ಕು ಉಪಗ್ರಹಗಳಿಗೆ ಪೂರಕವಾಗಿ ಪಿಎಸ್ ಎಲ್ ವಿ-ಸಿ 31 ಕೆಲಸ ಮಾಡಲಿದೆ. ಈ ಏಳು ಸರಣಿ ಉಪಗ್ರಹಗಳು ಯಶಸ್ವಿಯಾಗಿ ಉಡಾವಣೆಗೊಂಡರೆ ವಿಶ್ವದ ಸ್ಥಾನೀಕರಣ ವ್ಯವಸ್ಥೆಗೆ ಭಾರತ ಸಮಾನವಾಗಲಿದೆ ಮತ್ತು ರಸ್ತೆ, ವಾಯು ಮತ್ತು ನೌಕಾ ಸೇವೆಗಳನ್ನು ಇನ್ನಷ್ಟು ವಿಶಾಲ ಪ್ರದೇಶಗಳಿಗೆ ವಿಸ್ತರಿಸಲು ಅನುಕೂಲವಾಗುತ್ತದೆ.

ಈ ವರ್ಷ ಇಸ್ರೋ ಕೈಗೊಳ್ಳುತ್ತಿರುವ ಮೊದಲ ಉಪಗ್ರಹ ಉಡಾವಣಾ ಅಭಿಯಾನ ಪಿಎಸ್ ಎಲ್ ವಿ-ಸಿ 31 ಆಗಿದೆ. ಇನ್ನೆರಡು ಉಪಗ್ರಹಗಳನ್ನು ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಉಡಾಯಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್