ಬಂಧನ 
ದೇಶ

ಅಲ್ ಖೈದಾ ನಂಟು: ದೆಹಲಿ ಪೊಲೀಸರಿಂದ ಹರ್ಯಾಣದಲ್ಲಿ ಶಂಕಿತನ ಸೆರೆ

ಉಗ್ರ ಸಂಘಟನೆ ಅಲ್ ಖೈದಾ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ಹರ್ಯಾಣದ ಮೇವಾತ್ ಜಿಲ್ಲೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ದೆಹಲಿ ಪೊಲೀಸರು...

ನವದೆಹಲಿ: ಉಗ್ರ ಸಂಘಟನೆ ಅಲ್ ಖೈದಾ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ಹರ್ಯಾಣದ ಮೇವಾತ್ ಜಿಲ್ಲೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂಬ ಶಂಕೆ ಹಿನ್ನಲೆ ದೆಹಲಿ ಪೊಲೀಸರು ಇಲ್ಲಿವರೆಗೂ ಐವರನ್ನು ಬಂಧಿಸಿದ್ದಾರೆ. ಬಂಧಿತನನ್ನು 32 ವರ್ಷದ ಅಬ್ದುಲ್ ಸಮಿ ಎಂದು ಗುರುತಿಸಲಾಗಿದ್ದು, ಇಂದು ಕೋರ್ಟ್ ಮುಂದು ಹಾಜರುಪಡಿಸಲಾಗಿತ್ತು. ಕೋರ್ಟ್ ಶಂಕಿತ ಉಗ್ರನನ್ನು ಫೆಬ್ರವರಿ 1ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಪೊಲೀಸ್ ವಿಶೇಷ ಆಯುಕ್ತ(ವಿಶೇಷ ಘಟಕ) ಅರವಿಂದ್ ದೀಪ್ ಹೇಳಿದ್ದಾರೆ.

ಅಬ್ದುಲ್ ಸಮಿ ಜಾರ್ಖಂಡ್ ನ ಜೆಮ್ ಶೇಡ್ ಪುರ ನಿವಾಸಿಯಾಗಿದ್ದು, ಭಾರತೀಯ ಉಪಖಂಡದಲ್ಲಿ ಅಲ್ ಖೈದಾದ ಭಾಗವಾಗಿ ಪ್ರಮುಖ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ ಖೈದಾ ಪರ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಶಿಕ್ಷಕ ಮೌಲಾನ ಅನ್ಜರ್ ಶಹಾ ಎಂಬಾತನನ್ನು ಜನವರಿ 6 ರಂದು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕದಲ್ಲಿ 44.84 ಲಕ್ಷ ಮತದಾರರ ಹಕ್ಕಿಗೆ ಕುತ್ತು, ಪಟ್ಟಿಯಿಂದ ಕೈಬಿಡುವ ಸಾಧ್ಯತೆ!

10 ವರ್ಷದಲ್ಲಿ 152 ಪ್ರಶ್ನೆ ಪತ್ರಿಕೆ ಲೀಕ್: ಪ್ರಧಾನ್ ರಾಜಿನಾಮೆ ಕೊಡಬೇಕು, Modi ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು; 3 ಷರತ್ತು ಹಾಕಿದ ರಾಹುಲ್

'3 ಬಾರಿ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ; ಅರ್ಥಪೂರ್ಣ ಮಾತುಕತೆಗೆ ಏಕಿಷ್ಟು ತಡ?': ಕೇಂದ್ರಸರ್ಕಾರಕ್ಕೆ Annamalai ಪ್ರಶ್ನೆ!

ಬಸ್ ನಿಲ್ದಾಣದಿಂದಲೇ ಆರ್‌ಟಿಸಿ ಬಸ್ ಹೈಜಾಕ್; 18 ಕಿ.ಮೀ ಬೆನ್ನಟ್ಟಿ ಸಿನಿಮೀಯ ರೀತಿ ಸೆರೆ, Video Viral

2012ರ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ 'ಸುಪ್ರೀಂ' ಅಸ್ತು!