ದೇಶ

ನ್ಯಾಯಾಲಯಕ್ಕೆ ಹಾಜರಾದ ಕರುಣಾನಿಧಿ

Manjula VN

ಚೆನ್ನೈ: ಡಿಎಂಕೆ ಮುಖವಾಣಿಯಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಅವಹೇಳನಕಾರಿ ಲೇಖನ ಬರೆದಿದ್ದಾರೆ ಎಂಬ ಆರೋಪದ ಮೇಲೆ ಸಿಎಂ ಜಯಲಲಿತಾ ಹೂಡಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆ ಸೋಮವಾರ ನಡೆಯಿತು.

ಚೆನ್ನೈನ ಪ್ರಿನ್ಸಿಪಾಲ್ ಸೆಷನ್ಸ್ ಕೋರ್ಟ್‍ನಲ್ಲಿ ನಡೆದ ವಿಚಾರಣೆಗೆ ಡಿಎಂಕೆ ವರಿಷ್ಠ ಕರುಣಾನಿಧಿ ಹಾಜರಾಗಿದ್ದರು. 92 ವರ್ಷದ ನಾಯಕ ಗಾಲಿ ಕುರ್ಚಿಯಲ್ಲಿ ಆಗಮಿಸಿದರು. ನ್ಯಾಯಾಧೀಶ ಎನ್.ಆದಿನಾಥನ್ 1 ನಿಮಿಷದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರುಣಾನಿಧಿ ಹೇಳಿಕೆ ಪಡೆದುಕೊಂಡು ಮಾ.10ಕ್ಕೆ ವಿಚಾರಣೆ ಮುಂದೂಡಿದರು.

ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್, ಪುತ್ರಿ ಕನಿಮೋಳಿ, ಡಿಎಂಕೆ ನಾಯಕರಾದ ಟಿ.ಆರ್. ಬಾಲು, ದಯಾನಿಧಿ ಮಾರನ್, ಇತರರು ಕೋರ್ಟ ಲ್ಲಿ ಉಪಸ್ಥಿತರಿದ್ದರು. ವಿಚಾರಣೆ ಬಳಿಕ ಮಾತನಾ ಡಿದ ಹಿರಿಯ ನಾಯಕ ``ನಾನು ಹೇಳುವುದಕ್ಕೇನೂ ಇಲ್ಲ. ನ್ಯಾಯಾಲಯ ಅದರದ್ದೇ ಆದ ತೀರ್ಮಾನ ಕೈಗೊಳ್ಳಲಿದೆ. ನ್ಯಾಯದ ಹಿಂದೆ ಜನರಿದ್ದಾರೆ'' ಎಂದರು. ಸದ್ಯವೇ ಚುನಾವಣೆ ನಡೆವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

SCROLL FOR NEXT