ಪೂರ್ಣೆಯಾ (ಬಿಹಾರ): ಕಳೆದ ಭಾನುವಾರದಿಂದ ತಲೆಮರೆಸಿಕೊಂಡಿದ್ದ ಆಡಳಿತರೂಢ ಜೆಡಿಯು ಶಾಸಕಿಯ ಪತಿಯನ್ನು ಬುಧವಾರ ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಪ್ರಕರಣವೊಂದರಲ್ಲಿ ಸಾಕ್ಷಿಗೆ ಕೊಲೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಜೆಡಿಯು ಶಾಸಕಿ ಭೀಮಾ ಭಾರ್ತಿ ಅವರ ಪತಿ ಅವದೇಶ್ ಮಂಡಲ್ ಅವರನ್ನು ಇಂದು ಮರಂಗ ಪೊಲೀಸರು ಬಂಧಿಸಿದ್ದಾರೆ.
ಪರ್ಬಟ್ಟ ಗ್ರಾಮವೊಂದರ ಮನೆಯಲ್ಲಿ ಅಡಗಿದ್ದ ಮಂಡಲ್ ಹಾಗೂ ಆತನ ಮೂವರು ಸಹಚರರನ್ನು ಬಂಧಿಸಲಾಗಿದೆ ಎಂದು ಪೂರ್ಣಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಂತ್ ಕುಮಾರ್ ತಿವಾರಿ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಮಂಡಲ್ ಅವರು ಹಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಬೆದರಿಕೆ ಹಾಕಿದ ಪ್ರಕರಣ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ತಿವಾರಿ ತಿಳಿಸಿದ್ದಾರೆ.