ಹಿಮಾಲಯ (ಸಂಗ್ರಹ ಚಿತ್ರ) 
ದೇಶ

ಆಧ್ಯಾತ್ಮದತ್ತ ಆಕರ್ಷಿತಳಾಗಿ ಹಿಮಾಲಯಕ್ಕೆ ತೆರಳಿದ ಮದ್ರಾಸ್ ಐಐಅಟಿ ವಿದ್ಯಾರ್ಥಿನಿ!

ಮದ್ರಾಸ್ ಐಐಟಿಯ ಎಂಎಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು, ಆಧ್ಯಾತ್ಮದತ್ತ ಆಕರ್ಷಿತಳಾಗಿದ್ದು ಹಿಮಾಲಯಕ್ಕೆ ತೆರಳಿದ್ದಾಳೆ.

ಚೆನ್ನೈ: ಮದ್ರಾಸ್ ಐಐಟಿಯ ಎಂಎಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು, ಆಧ್ಯಾತ್ಮದತ್ತ ಆಕರ್ಷಿತಳಾಗಿದ್ದು ಹಿಮಾಲಯಕ್ಕೆ ತೆರಳಿದ್ದಾಳೆ.
ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಪ್ರತ್ಯುಷಾ, ಹಾಸ್ಟೆಲ್ ನಿಂದ ಹೊರಡುವುದಕ್ಕೂ ಮುನ್ನ ಪತ್ರವೊಂದನ್ನು ಬರೆದಿಟ್ಟು, ತಾನು ಆಧ್ಯಾತ್ಮಿಕ ಸಾಧನೆಗಾಗಿ ಹಿಮಾಲಯಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾಳೆ. ತಾನು ದೇವರ ರಕ್ಷಣೆಯಲ್ಲಿದ್ದು ತನ್ನ ಇರುವಿಕೆ ಬಗ್ಗೆ ಕುಟುಂಬ ಸದಸ್ಯರಿಗೆ ಇನ್ನೆಂದಿಗೂ ಮಾಹಿತಿ ದೊರೆಯುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.
ಹಿಮಾಲಯಕ್ಕೆ ತೆರಳುವುದಕ್ಕೂ  ಮುನ್ನ ಹಾಸ್ಟೆಲ್ ನ ದಾಖಲಾತಿ ಪುಸ್ತಕದಲ್ಲಿ ತಾನು ಜ.20 ರಂದು ವಾಪಸ್ಸಾಗುವುದಾಗಿ ಬರೆದಿದ್ದಾಳೆ, ಹಾಸ್ಟೆಲ್ ನಿಂದ ಹೊರಟ ಯುವತಿ ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಪೋಷಕರು ಐಐಟಿ ಆಡಳಿತಮಂಡಳಿಯವರಲ್ಲಿ ವಿಚಾರಿಸಿದ ವೇಳೆ ಯುವತಿ ಹಿಮಾಲಯಕ್ಕೆ ಹೋಗಿರುವ ಅಂಶ ಬಯಲಾಗಿದೆ. ಎಫ್ ಐಆರ್ ದಾಖಲಿಸಿರುವ ಪೊಲೀಸರು ಯುವತಿಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!