ನವದೆಹಲಿ: ಪಠಾಣ್‌ಕೋಟ್ ಉಗ್ರ ದಾಳಿಗೆ ಸಂಬಂಧಿಸಿದಂತೆ ಗುರುದಾಸ್‌ಪುರ್ ಎಸ್ಪಿ ಸಲ್ವಿಂದರ್ ಸಿಂಗ್ ಅವರ ಮನೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡ ದಾಳಿ ನಡೆಸಿದೆ. ಸಲ್ವಿಂದರ್ ಸಿಂಗ್ ಅವರ ಸ್ನೇಹಿತ ಹಾಗೂ ಬಾಣಸಿಗನ ಮನೆಯಲ್ಲಿಯೂ ಎನ್‌ಐಎ ತಂಡ ದಾಳಿ ನಡೆಸಿದೆ.
ಪಠಾಣ್‌ಕೋಟ್ ದಾಳಿಗೆ ಮುನ್ನ ತನ್ನನ್ನು ಅಪಹರಿಸಲು ಯತ್ನಿಸಿದ್ದರು ಎಂದು ಸಲ್ವಿಂದರ್ ಸಿಂಗ್ ಹೇಳಿದ್ದರು. ಆದರೆ ಸಲ್ವಿಂದರ್ ಅವರ ಸ್ನೇಹಿತ ಮತ್ತು ಅವರ ಬಾಣಸಿಗ ನೀಡಿದ ಹೇಳಿಕೆಯಲ್ಲಿ ವೈರುಧ್ಯವಿದ್ದ ಕಾರಣ ಇವರಿಬ್ಬರ ಮನೆಯ ಮೇಲೆಯೂ ದಾಳಿ ನಡೆಸಲಾಗಿದೆ.
ಸಲ್ವಿಂದರ್ ಸಿಂಗ್ ಅವರ ನಿವಾಸ ಸೇರಿದಂತೆ ಪಂಜಾಬ್ ನ 5 ಕೇಂದ್ರಗಳಲ್ಲಿ ಎನ್‌ಐಎ ದಾಳಿ ನಡೆಸಿದೆ.