ದೇಶ

ರಾಫೆಲ್ ಫೈಟರ್ ಜೆಟ್ ಒಪ್ಪಂದ ಮಾತುಕತೆ ಸಂಕೀರ್ಣ ಪ್ರಕ್ರಿಯೆ: ಫ್ರಾನ್ಸ್ ರಾಯಭಾರಿ

Srinivas Rao BV

ನವದೆಹಲಿ: ಭಾರತದೊಂದಿಗಿನ ರಾಫೆಲ್ ಫೈಟರ್ ಜೆಟ್ ವಿಮಾನ ಪೂರೈಕೆ ಒಪ್ಪಂದದ ಫಲಿತಾಂಶದ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡುವುದಿಲ್ಲ, ಅದೊಂದು ಸಂಕೀರ್ಣ ಮಾತುಕತೆಯ ವಿಷಯ ಎಂದು ಭಾರತದಲ್ಲಿರುವ ಫ್ರೆಂಚ್ ನ ರಾಯಭಾರಿ ಫ್ರಾಂಕೋಯಿಸ್‌ ರಿಚಿಯರ್‌ ಹೇಳಿದ್ದಾರೆ.
ರಾಫೆಲ್ ಫೈಟರ್ ಜೆಟ್ ವಿಮಾನಗಳ ಪೂರೈಕೆ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿವೆ. ಇದರ ಫಲಿತಾಂಶ ಏನಾಗುತ್ತದೆ ಎಂದು ಈಗಲೇ ಹೇಳುವುದು ಅಸಾಧ್ಯ, ವಾಸ್ತವವಾಗಿ ಇದೊಂದು ಸಂಕೀರ್ಣ ಮಾತುಕತೆ ಪ್ರಕ್ರಿಯೆ ಆಗಿದ್ದು, ಏನಾಗಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಗಣರಾಜ್ಯೋತ್ಸವ ದಿನಾಚರಣೆಯ ಅತಿಥಿಯಾಗಿ ಭಾಗವಹಿಸಲು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಭಾರತಕ್ಕೆ ಭೇಟಿ ನೀಡುತ್ತಿದ್ದು ಈ ವೇಳೆ ಬಹುನಿರೀಕ್ಷಿತ ರಾಫೆಲ್ ಫೈಟರ್ ಜೆಟ್ ವಿಮಾನ ಪೂರೈಕೆ ಡೀಲ್ ಗೆ ಪ್ರಧಾನಿ ಮೋದಿ- ಫ್ರಾನ್ಸ್ ಅಧ್ಯಕ್ಷರು ಸಹಿ ಹಾಕಲಿದ್ದಾರೆ ಎಂಬ ನಿರೀಕ್ಷೆಗಳಿಗೆ ರಿಚಿಯರ್‌ ಸ್ಪಷ್ಟನೆ ನೀಡಿದ್ದು ತಮಗೂ ಒಪ್ಪಂದ ಯಶಸ್ವಿಯಾಗುವ ವಿಶ್ವಾಸವಿದೆ. ಆದರೆ ಮಾತುಕತೆಯ ಫಲಿತಾಂಶ ಏನಾಗಲಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

SCROLL FOR NEXT