ಅಯ್ಯಪ್ಪ 
ದೇಶ

ಮಹಿಳೆಯರ ಶಬರಿಮಲೆ ಈ ಪೆರುನಾಡ್ ದೇವಾಲಯ

ಪೆರುನಾಡ್ ಶ್ರೀ ಧರ್ಮ ಶಾಸ್ತಾ ದೇವಾಲಯವನ್ನು ಮಹಿಳೆಯರ ಶಬರಿಮಲೆ ಎಂದು ಘೋಷಿಸಬೇಕು ಎಂದು ಟ್ರಾವಂಕೂರ್ ದೇವಸ್ವಂ ಬೋರ್ಡ್ ...

ಪಟ್ಟನಂತಿಟ್ಟ: ಪೆರುನಾಡ್ ಶ್ರೀ ಧರ್ಮ ಶಾಸ್ತಾ ದೇವಾಲಯವನ್ನು ಮಹಿಳೆಯರ ಶಬರಿಮಲೆ ಎಂದು ಘೋಷಿಸಬೇಕು ಎಂದು ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ಅಧ್ಯಕ್ಷ ಪ್ರಾಯರ್ ಗೋಪಾಲಕೃಷ್ಣನ್ ಹೇಳಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಗೋಪಾಲಕೃಷ್ಣನ್ ಅವರು,  ಶಬರಿಮಲೆಯಿಂದ ಪಂದಳಂಗೆ ಭಗವಂತ ಶಾಸ್ತಾ ಹಿಂತಿರುಗುವ ವೇಳೆ ಆ ವಿಗ್ರಹಕ್ಕೆ ತಿರುವಾಭರಣ ತೊಡಿಸುವುದು ಪೆರುನಾಡ್ ದೇವಾಲಯದಲ್ಲಾಗಿದೆ. ಆದ್ದರಿಂದ ಇಲ್ಲಿ ಮಹಿಳೆಯರು ಅಯ್ಯಪ್ಪನನ್ನು ಪೂಜಿಸುವ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯವನ್ನೂ ನೀಡಬೇಕು.
ಇಲ್ಲಿ ಬರುವ ಭಕ್ತರಲ್ಲಿ ಹೆಚ್ಚಿನವರು ಮಹಿಳೆಯರೇ ಆದ್ದರಿಂದ ಪೆರುನಾಡ್ ದೇವಾಲಯದಲ್ಲಿ ಅವರಿಗೆ ಹೆಚ್ಚಿನ ಸೌಕರ್ಯ ಒದಗಿಸಲು ದೇಣಿಗೆಯ ಅವಶ್ಯಕತೆಯಿದೆ. ತಿರುವಾಭರಣಂ  ಯಾತ್ರೆ ಎರಡನೇ ದಿನದಂದು ವಿರಮಿಸುವ ಹೊತ್ತಲ್ಲಿ, ಇಲ್ಲಿನ ಭಕ್ತರಿಗೆ ರಾತ್ರಿ 11.30ರ ವರೆಗೆ ಅಯ್ಯಪ್ಪನ ದರ್ಶನ ಕಲ್ಪಿಸಲಾಗುತ್ತದೆ. 
ಶಬರಿಮಲೆ ಅಯ್ಯಪ್ಪನ ಆರಾಟ್ಟು ಕಾರ್ಯಕ್ರಮ ನಡೆಯುವ ಪಂಪಾದಲ್ಲಿ  10 ರಿಂದ 50ರ ವರೆಗೆ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ. ಇದರ ಬದಲು  ಮಲಯಾಳಂ ತಿಂಗಳಾದ ವೃಶ್ಚಿಕದ ಹುಣ್ಣಿಮೆಯಂದು ಪಂಪಾದಲ್ಲಿ ನಡೆಯುವ ಬಲಿತರ್ಪಣಂ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹಿಳೆಯರಿಗೆ ಅನುಮತಿ ನೀಡಲಾಗುತ್ತದೆ. ಆದ್ದರಿಂದ ತ್ರಿವೇಣಿಯಲ್ಲಿ ಮಹಿಳೆಯರಿಗೆ ಸ್ನಾನ ಮಾಡಲು  ಪ್ರತ್ಯೇಕ ಕಲ್ಯಾಣಿಯ ವ್ಯವಸ್ಥೆ ಮಾಡಬೇಕೆಂದು ಗೋಪಾಲಕೃಷ್ಣನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT