ಕೇಂದ್ರ ಹವಾಮಾನ ಇಲಾಖೆ (ಸಂಗ್ರಹ ಚಿತ್ರ) 
ದೇಶ

ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಭಾರತದಿಂದ ಎಲ್ ನಿನೋ ಎಚ್ಚರಿಕೆ..!

ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಭಾರತ ಭಾನುವಾರದಿಂದ ಎಲ್ ನಿನೋ ಎಚ್ಚರಿಕೆ ಸಂದೇಶ ರವಾನಿಸಲು ಆರಂಭಿಸಿದೆ...

ನವದೆಹಲಿ: ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಭಾರತ ಭಾನುವಾರದಿಂದ ಎಲ್ ನಿನೋ ಎಚ್ಚರಿಕೆ ಸಂದೇಶ ರವಾನಿಸಲು ಆರಂಭಿಸಿದೆ.

ದಕ್ಷಿಣ ಏಷ್ಯಾದ ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್, ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳ ರಾಷ್ಟ್ರಗಳಿಗೆ ಭಾರತ ಹವಾಮಾನ ಇಲಾಖೆ ಇಂದಿನಿಂದ ಎಲ್ ನಿನೋ  ಸಂದೇಶ ರವಾನಿಸಲು ಆರಂಭಿಸಿದೆ. ಈ ಹಿಂದೆ ವಿಶ್ವ ಹವಾಮಾನ ಸಂಸ್ಥೆ ಭಾರತೀಯ ಹವಾಮಾನ ಇಲಾಖೆಯನ್ನು ಪ್ರಾದೇಶಿಕ ಹವಾಮಾನ ಕೇಂದ್ರವಾಗಿ ಅನುಮೋದನೆ ನೀಡಿತ್ತು. ಈ  ಹಿನ್ನಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಇಂದಿನಿಂದ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಹವಾಮಾನ ಸಂಬಂಧಿ ಸಂದೇಶ ರವಾನೆ ಮಾಡಲು ಆರಂಭಿಸಿದೆ. ಭವಿಷ್ಯದಲ್ಲಿ ಈ ಸಂದೇಶ  ವ್ಯವಸ್ಥೆಯನ್ನು ಮಯನ್ಮಾರ್ ದೇಶಕ್ಕೂ ವಿಸ್ತರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ಕೇಂದ್ರ ಹವಾಮಾನ ಇಲಾಖೆಯ ಹಿರಿಯ ತಜ್ಞ ಎಸ್ ಪೈ ಅವರು, ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಎಲ್ ನಿನೋ ಸಂದೇಶ ರವಾನಿಸಲು ನಾವು ಇಂದಿನಿಂದ ಆರಂಭಿಸಿದ್ದೇವೆ.  ಪ್ರತೀ ತಿಂಗಳು ಈ ಮಾಹಿತಿಯನ್ನು ನೀಡಲಾಗುತ್ತಿರುತ್ತದೆ. ಭಾರತೀಯ ಹವಾಮಾನ ಇಲಾಖೆಗೆ ವಿಶ್ವ ಹಮಾಮಾನ ಇಲಾಖೆ ಪ್ರಾದೇಶಿಕ ಹವಾಮಾನ ಕೇಂದ್ರವಾಗಿ ಅನುಮೋದನೆ ನೀಡಿದೆ.  ಅಲ್ಲದೆ ಹವಾಮಾನ ಮತ್ತು ಮಾನ್ಸೂನ್ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಎಲ್ ನಿನೋ ಸಂದೇಶ ರವಾನಿಸಲಾಗಿದೆ ಎಂದು  ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಗು ದೀರ್ಘಕಾಲ ಉಳಿಯಲ್ಲ: ಶಾಂತಿ ಪ್ರಸ್ತಾವನೆ ಮಾತುಕತೆ ನಡುವೆ ಟ್ರಂಪ್ ಎಚ್ಚರಿಕೆ!

3 ವರ್ಷ ಪೂರೈಸುವ ಮುನ್ನ ದೆಹಲಿಗೆ ಸಿದ್ದರಾಮಯ್ಯ ದೌಡು: ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ..!

ಹಿಮದ ಮಡಲಲ್ಲಿ ವಿಷ್ಣುವಿನ ಸನ್ನಿಧಿ: ಭಕ್ತಿ–ಪ್ರಕೃತಿಯ ಅಪೂರ್ವ ಸಂಗಮ ಬದರಿನಾಥ, ಆಧ್ಯಾತ್ಮಿಕ ಯಾತ್ರೆಯ ಸಂಪೂರ್ಣ ಮಾಹಿತಿ ಇಲ್ಲಿದೆ...

IPL ಇತಿಹಾಸದಲ್ಲಿಯೇ ಶರವೇಗದಲ್ಲಿ ಅರ್ಧಶತಕ: ಉರ್ವಿಲ್ ಪಟೇಲ್ ಬ್ಯಾಟಿಂಗ್ ನೋಡುತ್ತಾ ನಿಂತ ಕೊಹ್ಲಿ! Video ವೈರಲ್

ರಾಹುಲ್- ವಿಜಯ್ ದೋಸ್ತಿಗೆ ಬೆದರಿತೆ ಕೇಂದ್ರ ಸರ್ಕಾರ? ರೀಲ್, ಪೋಟೋ, ಪೋಸ್ಟ್ ಬ್ಲಾಕ್ ಮಾಡಿದ Instagram? ಕಾಂಗ್ರೆಸ್ ಆರೋಪ

SCROLL FOR NEXT