ಇಂಡೋ-ಪಾಕ್ ಗಡಿ (ಸಂಗ್ರಹ ಚಿತ್ರ) 
ದೇಶ

ಇಂಡೋ-ಪಾಕ್ ಗಡಿಯಲ್ಲಿ ಇಸ್ರೇಲ್ ಮಾದರಿ ಬೇಲಿ

ಪಠಾಣ್ ಕೋಟ್ ದಾಳಿ ಪ್ರಕರಣವನ್ನು ಗಂಭೀರವಾಗ ಪರಿಗಣಿಸಿರುವ ಭಾರತ ಸರ್ಕಾರ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಇಂಡೋ-ಪಾಕ್ ಗಡಿಯಲ್ಲಿ ಉನ್ನತ ಮಟ್ಟದ ತಂತ್ರಜ್ಞಾನದ ಬೇಲಿ ನಿರ್ಮಾಣಕ್ಕೆ ಮುಂದಾಗಿದೆ...

ನವದೆಹಲಿ: ಪಠಾಣ್ ಕೋಟ್ ದಾಳಿ ಪ್ರಕರಣವನ್ನು ಗಂಭೀರವಾಗ ಪರಿಗಣಿಸಿರುವ ಭಾರತ ಸರ್ಕಾರ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಇಂಡೋ-ಪಾಕ್ ಗಡಿಯಲ್ಲಿ ಉನ್ನತ  ಮಟ್ಟದ ತಂತ್ರಜ್ಞಾನದ ಬೇಲಿ ನಿರ್ಮಾಣಕ್ಕೆ ಮುಂದಾಗಿದೆ.

ಅತ್ಯುನ್ನತ ಮಟ್ಟದ ತಂತ್ರಜ್ಞಾನದ ಬೇಲಿ ನಿರ್ಮಾಣಕ್ಕೆ ಮುಂದಾಗಿದ್ದ ಭಾರತಕ್ಕೆ ಇಸ್ರೇಲ್ ಮಾದರಿಯ ಬೇಲಿ ನಿರ್ಮಾಣ ವ್ಯವಸ್ಥೆ ಹೆಚ್ಚು ಸುರಕ್ಷಿತ ಎಂದು ತಜ್ಞರು ಅಭಿಪ್ರಾಯಪಟ್ಟ ಹಿನ್ನಲೆಯಲ್ಲಿ  ಭಾರತದ ಗಡಿಗಳಲ್ಲಿ ಈ ಮಾದರಿಯ ಬೇಲಿಗಳನ್ನು ನಿರ್ಮಾಣ ಮಾಡಲು ಭಾರತ ಸರ್ಕಾರ ಮುಂದಾಗಿದೆ. ಗಡಿಯಲ್ಲಿ ಉಗ್ರರು ನುಸುಳುವುದನ್ನು ತ‌ಡೆಯಲು ಇಸ್ರೇಲ್ ಮಾದರಿಯಲ್ಲಿಯೇ  ಸುರಕ್ಷಿತ ಬೇಲಿ ನಿರ್ಮಾಣ ಮಾಡಲು ಭಾರತ ತೀರ್ಮಾನಿಸಿದ್ದು, ಅದರ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಉತ್ತಮ ಗುಣಮಟ್ಟದ ಕ್ಯಾಮೆರಾಗಳು, ರಾತ್ರಿ ಕಾಣುವಂತೆ ಅತ್ಯುನ್ನತ ತಂತ್ರಜ್ಞಾನದ ವ್ಯವಸ್ಥೆ, ಎಲೆಕ್ಟ್ರಾನಿಕ್ ಟಚ್ ಅಂಡ್ ಮಾನಿಟರ್ ಸೆನ್ಸಾರ್, ವಿಶೇಷ ರಡಾರ್ ಗಳು ಇತ್ಯಾದಿಗಳಿಂದ  ಬೇಲಿಯ ಸುರಕ್ಷತೆಯನ್ನು ಬಿಗಿಗೊಳಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ.

ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಪಾಕ್ ಮೂಲದ ಜೈಷ್ – ಎ – ಮೊಹ್ಮದ್ ಉಗ್ರರು ಗ‌ಡಿಯಲ್ಲಿಯೇ ಬಂದು ದಾಳಿ ನಡೆಸಿರುವ ಕುರಿತು ತನಿಖಾ ತಂಡಗಳು ವರದಿ  ನೀಡಿರುವ ಹಿನ್ನೆಲೆಯಲ್ಲಿ ಗಡಿ ಸುರಕ್ಷತೆ ಕುರಿತಂತೆ ಗೃಹ ಸಚಿವ ರಾಜನಾಥ್ ಸಿಂಗ್ ಈ ಸಂಬಂಧ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಸಂಬಂಧಿಸಿದ ಸಚಿವಾಲಯದ  ಅಧಿಕಾರಿಗಳೊಂದಿಗೆ ಕೆಲವು ಸುತ್ತಿನ ಚರ್ಚೆ ನಡೆಸಿದ್ದಾರೆ.

ಇನ್ನು ಇದಕ್ಕೆ ಇಂಬು ನೀಡುವಂತೆ ಗ‌ಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಪೂರಕ ಸಹಕಾರ ವ್ಯಕ್ತಪಡಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, `ಗಡಿ ಬೇಲಿಯ  ತಂತ್ರಜ್ಞಾನ ಕುರಿತಂತೆ ಭಾರತದೊಂದಿಗೆ ಸಹಕರಿಸಲು ಇಸ್ರೇಲ್ ಸಿದ್ಧವಿದೆ’ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ