ಶನಿ ಸಿಂಗ್ನಾಪುರ ದೇವಾಲಯ 
ದೇಶ

ಹೆಲಿಕಾಪ್ಟರ್ ಮೂಲಕ ಶನಿ ದೇಗುಲಕ್ಕೆ ಮುತ್ತಿಗೆ: ಮಹಿಳಾ ಸಂಘಟನೆ ಎಚ್ಚರಿಕೆ

ಖ್ಯಾತ ಶನಿ ಸಿಂಗ್ನಾಪುರ ದೇವಾಲಯಕ್ಕೆ ಮಂಗಳವಾರ ಮುತ್ತಿಗೆ ಹಾಕುವುದಾಗಿ ಮಹಿಳಾ ಸಂಘಟನೆಯೊಂದು ಸೋಮವಾರ ಎಚ್ಚರಿಕೆ ನೀಡಿದೆ..

ಅಹಮದ್​ನಗರ (ಮಹಾರಾಷ್ಟ್ರ): ಖ್ಯಾತ ಶನಿ ಸಿಂಗ್ನಾಪುರ ದೇವಾಲಯಕ್ಕೆ ಮಂಗಳವಾರ ಮುತ್ತಿಗೆ ಹಾಕುವುದಾಗಿ ಮಹಿಳಾ ಸಂಘಟನೆಯೊಂದು ಸೋಮವಾರ ಎಚ್ಚರಿಕೆ ನೀಡಿದೆ. ಅಲ್ಲದೆ ಅಗತ್ಯ ಬಿದ್ದಲ್ಲಿ ಗರ್ಭ ಗುಡಿ ತೆರೆಯುವ ವೇಳೆಯಲ್ಲಿ ಹೆಲಿಕಾಪ್ಟರ್ ಮೂಲಕ ಬಂದು ದೇವಾಲಯ ಪ್ರವೇಶಿಸುವುದಾಗಿಯೂ ಬೆದರಿಕೆ ಹಾಕಿದೆ.
ಶನಿ ಸಿಂಗ್ನಾಪುರ ದೇವಾಲಯ ಪ್ರವೇಶಕ್ಕೆ ಮಹಿಳಾ ಭಕ್ತರಿಗೆ ನಿಷೇಧವಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ತೀವ್ರಗೊಳಿಸಲಾಗಿದೆ. ಆದರೆ ಏನೇ ಆದರೂ ಶನಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತಾವು ದೇವಾಲಯ ಪ್ರವೇಶಿಸುವುದು ಖಚಿತ ಎಂದು ಭೂಮಾತಾ ರಣ್​ರಾಗಿಣಿ ಬ್ರಿಗೇಡ್ ಅಧ್ಯಕ್ಷೆ ತೃಪ್ತಿ ದೇಸಾಯಿ ಅವರು ಹೇಳಿದ್ದಾರೆ.
ಈ ಸಂಬಂಧ ನಾವು ಈಗಾಗಲೇ ಹೆಲಿಕಾಪ್ಟರ್ ಬುಕ್ ಮಾಡಿದ್ದೇವೆ. ಬಯಲಿನ ಮೂಲಕ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡದೇ ಇದ್ದಲ್ಲಿ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಅದರಿಂದ ಏಣಿಗಳನ್ನು ಇಳಿಸಿ ದೇವಾಲಯಕ್ಕೆ ಇಳಿಯುತ್ತೇವೆ ಎಂದಿದ್ದಾರೆ.
ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆ ಇದಾಗಿರುವುದರಿಂದ ಯಾವುದೇ ಭದ್ರತಾ ವ್ಯವಸ್ಥೆಗೂ ನಾವು ಹೆದರುವುದಿಲ್ಲ. ಮಹಾರಾಷ್ಟ್ರ ರಾಜ್ಯದ ವಿವಿಧೆಡೆಗಳಿಂದ ಸುಮಾರು 1500 ಮಹಿಳೆಯರು ಮಂಗಳವಾರ ದೇವಾಲಯ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶನಿ ಸಿಂಗ್ನಾಪುರ ದೇವಾಲಯ ಅತ್ಯಂತ ವಿಶಿಷ್ಠ ದೇವಾಲಯವಾಗಿದ್ದು ಈ ದೇವಾಲಯಕ್ಕೆ ಗೋಡೆಗಳಾಗಲೀ, ಛಾವಣಿಯಾಗಲೀ ಇಲ್ಲ. ಐದಡಿ ಎತ್ತರದ ಸ್ವಯಂಭೂ ಕರಿಯ ಶಿಲೆಯನ್ನು ಶನಿದೇವರ ರೂಪದಲ್ಲಿ ಇಲ್ಲಿ ಪ್ರಾರ್ಥಿಸಲಾಗುತ್ತದೆ. ಮಹಿಳೆಯರಿಗೆ ಇಲ್ಲಿ ತಲೆ ತಲಾಂತರದಿಂದ ಪ್ರವೇಶ ಇಲ್ಲ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT