ಸಾಂದರ್ಭಿಕ ಚಿತ್ರ 
ದೇಶ

ರಾತ್ರಿ ಇಡೀ ಚಾರ್ಜ್ ಗೆ ಹಾಕಿದ್ದ ಮೊಬೈಲ್ ಸ್ಫೋಟ: ದಂಪತಿ ಸಾವು

ಮನೆಯಲ್ಲಿದ್ದ ಮೊಬೈಲ್ ಸ್ಫೋಟಗೊಂಡ ಪರಿಣಾಮ ದಂಪತಿ ಸಾವನ್ನಪ್ಪಿರುವ ಘಟನೆ ಚೆನ್ನೈನ ವ್ಯಾರ್ಸಪಡಿಯಲ್ಲಿ...

ಚೆನ್ನೈ: ಮನೆಯಲ್ಲಿದ್ದ ಮೊಬೈಲ್ ಸ್ಫೋಟಗೊಂಡ ಪರಿಣಾಮ ದಂಪತಿ ಸಾವನ್ನಪ್ಪಿರುವ ಘಟನೆ ಚೆನ್ನೈನ ವ್ಯಾರ್ಸಪಡಿಯಲ್ಲಿ ಸೋಮವಾರ ನಡೆದಿದೆ. 
ರಾಜೇಂದ್ರನ್ ಮತ್ತು ರಾಣಿ ಮೃತಪಟ್ಟವರು. ರಾತ್ರಿ ಇಡೀ ಸೆಲ್ ಫೋನನನ್ನು ಚಾರ್ಜ್ ಹಾಕಲಾಗಿತ್ತು. ಅದೇ ಮೊಬೈಲ್ ನಲ್ಲಿ ಬೆಳಿಗ್ಗೆ 5 ಗಂಟೆಗೆ ಅಲರಾಂ ಸೆಟ್ ಮಾಡಲಾಗಿತ್ತು. ಬೆಳಿಗ್ಗ ಅಲಾರಾಂ ಬಡಿಯುತ್ತಿದ್ದಂತೆ ಚಾರ್ಜಿಂಗ್ ಸ್ವಿಚ್ ಆಫ್ ಮಾಡುಲು ರಾಜೇಂದ್ರನ್  ಮುಂದಾಗಿದ್ದಾರೆ. ಈ ವೇಳೆ ಮೊಬೈಲ್ ಸ್ಫೋಟಗೊಂಡಿದೆ. ಘಟನೆಯಲ್ಲಿ ರಾಜೇಂದ್ರನ್ ಮತ್ತು ಅವರ ಪತ್ನಿ ರಾಣಿ ಮೃತಪಟ್ಟಿದ್ದಾರೆ. ಅದೇ ರೂಮಿನಲ್ಲಿ ಮಲಗಿದ್ದ ಮಗ ದಿನೇಶ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. 
ಮನೆಯಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಸ್ಥಳಿಯರು ಶಂಕಿಸಿದ್ದರು. ಆದರೆ, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಸಿಲಿಂಡರ್ ಸ್ಫೋಟಗೊಳ್ಳದೇ, ಮೊಬೈಲ್ ಸ್ಫೋಟದಿಂದಾಗಿ ಮೃತಪಟ್ಟಿರುವುದು ದೃಢಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

SIR ಅಕ್ರಮ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ