ದೇಶ

ತನ್ನ ತಂದೆ ಅಸ್ತಿಯ ಡಿಎನ್ ಎ ಪರೀಕ್ಷೆ ನಡೆಸಿ: ನೇತಾಜಿ ಮಗಳ ಮನವಿ

Mainashree
ನವದೆಹಲಿ: ಜಪಾನ್‌ನ ರೆಂಕೋಜಿ ದೇವಾಲಯದಲ್ಲಿರಿಸಲಾಗಿರುವ, ನೇತಾಜಿಯವರದೆಂದು ನಂಬಲಾಗಿರುವ ಬೂದಿಯ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದು ನೇತಾಜಿ ಅವರ ಮಗಳು ಅನಿತಾ ಬೋಸ್ ಆಗ್ರಹಿಸಿದ್ದಾರೆ.
ರೆಂಕೋಜಿ ದೇವಾಲಯದಲ್ಲಿ ಇರಿಸಲಾಗಿರುವ ನೇತಾಜಿಯವರದೆಂದು ನಂಬಲಾಗಿರುವ ಅಸ್ತಿಯ ಡಿಎನ್ ಎ ಪರೀಕ್ಷೆ ನಡೆಸಬೇಕು. ಈ ಮೂಲಕ ಅವರು ವಿಮಾನ ಅಪಘಾತದಲ್ಲಿ ಮೃತರಾಗಿದ್ದಾರೆಂಬ ಕುರಿತಾದ ರಹಸ್ಯವನ್ನು ಬಗೆಹರಿಸಬೇಕೆಂದು ಎಂದು ಅನಿತಾ ಬೋಸ್ ಮನವಿ ಮಾಡಿದ್ದಾರೆ. 
ಜರ್ಮನಿಯಲ್ಲಿರುವ ಖ್ಯಾತ ಆರ್ಥಿಕ ತಜ್ಞೆ ಅನಿತಾ ಬೋಸ್ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ನೇತಾಜಿ ಅವರ ಅಸ್ತಿ ಡಿಎನ್ ಎ ಒಳಪಡಿಸಬೇಕು ಎಂಬ ವಿಚಾರ ಕುರಿತು ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ ಎಂದು ವರದಿಗಳು ಹೇಳಿವೆ.
ತನ್ನ ತಂದೆ 1945ರ ಆಗಸ್ಟ್‌ನಲ್ಲಿ ತೈವಾನ್‌ನ ತಾಯ್ಹ್‌ಕು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದಾರೆಂದು ತಾನು ನಂಬಿದ್ದೇನೆಂಬುದನ್ನು ಉಲ್ಲೇಖಿಸಿದ ಅವರು, ನಿಗೂಢವನ್ನು ಭೇದಿಸುವ ಕೀಲಿಕೈ ಬೂದಿಯಲ್ಲೇ ಇದೆ ಎಂದಿದ್ದಾರೆ.
ರಹಸ್ಯವು ತಿಳಿಯಾಗಬೇಕೆಂದು ತಾನು ಖಂಡಿತವಾಗಿಯೂ ಬಯಸುತ್ತಿದ್ದೇನೆ. ರೆಂಕೋಜಿ ದೇವಾಲಯದಲ್ಲಿರುವ ಬೂದಿಯ ಡಿಎನ್‌ಎ ಪರೀಕ್ಷೆಯ ಸಂಬಂಧ ಭಾರತ ಹಾಗೂ ಜಪಾನ್ ಸರಕಾರಗಳು ಒಪ್ಪಂದವೊಂದಕ್ಕೆ ಬಂದರೆ ಖಂಡಿತ ಅದರಿಂದ ಸಹಾಯವಾಗಬಹುದು ಎಂದು ಅನಿತಾ ತಿಳಿಸಿದ್ದಾರೆ.
SCROLL FOR NEXT