ದೇಶ

ಇಬ್ಬರು ಮೇಜರ್ ಜನರಲ್ ಗಳ ವಿರುದ್ಧ ಭ್ರಷ್ಟಾಚಾರದ ಆರೋಪ: ಸಿಬಿಐ ತನಿಖೆಗೆ ರಕ್ಷಣಾ ಸಚಿವಾಲಯದ ಆದೇಶ

Srinivas Rao BV

ನವದೆಹಲಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಕೇಳಿಬಂದಿರುವ ಕಾರಣ ಮೇಜರ್ ಜನರಲ್ ಶ್ರೇಣಿಯ ಇಬ್ಬರು ಸೇನಾ ಅಧಿಕಾರಿಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ರಕ್ಷಣಾ ಸಚಿವಾಲಯ ಆಗ್ರಹಿಸಿದೆ.
ಅಪ್ರಾಮಾಣಿಕತೆ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ನಲ್ಲಿ ಕೆಲವು ಅಧಿಕಾರಿಗಳಿಗೆ ರಕ್ಷಣಾ ಇಲಾಖೆ ಬಡ್ತಿಯನ್ನು ನಿರಾಕರಿಸಿತ್ತು. ಮೇಜರ್ ಜನರಲ್ ಶ್ರೇಣಿಯ ಇಬ್ಬರು ಸೇನಾ ಅಧಿಕಾರಿಗಳ ಅಪ್ರಾಮಾಣಿಕತೆ ಬಗ್ಗೆ ಕೇಳಿಬಂದಿರುವ ಆರೋಪಗಳನ್ನು ಸಿಬಿಐ ಗೆ ಕಳಿಸಲಾಗಿದ್ದು, ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿ ರಕ್ಷಣಾ ಇಲಾಖೆಗೆ ಸಿಬಿಐ ಪ್ರತಿಕ್ರಿಯೆ ನೀಡಲಿದೆ.
ಮೂರು ಲೆಫ್ಟಿನೆಂಟ್ ಜನರಲ್ ಹುದ್ದೆಗಳು ಖಾಲಿಯಿದ್ದ ಹಿನ್ನೆಲೆಯಲ್ಲಿ ನೇಮಕಾತಿ ಮಾಡಲು ಸೇನೆಯ ವಿಶೇಷ ಉತ್ತೇಜನಾ ಮಂಡಳಿ ಸಭೆ ಸೇರಿತ್ತು. ಸಭೆಯಲ್ಲಿ 33 ಅಧಿಕಾರಿಗಳನ್ನು ಲೆಫ್ಟಿನೆಂತ್ ಜನರಲ್ ಹುದ್ದೆಗೆ ಪರಿಗಣಿಸಲಾಗಿತ್ತು. ಈ ಪೈಕಿ ಇಬ್ಬರು ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪ ಕೇಳಿಬಂದಿದ್ದು  ಈ ವಿಷಯದ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರೇ ಪರಿಶೀಲಿಸಿದ್ದಾರೆ.

SCROLL FOR NEXT