ದೇಶ

ಬಂಜೆತನ ನಿವಾರಣೆಗೆ ಔಷಧ: ಬಾಬಾ ರಾಮ್ ದೇವ್ ವಿರುದ್ಧ ತನಿಖಾ ವರದಿ

Shilpa D

ಡೆಹರಾಡೂನ್; ಯೋಗ ಗುರು ರಾಮ್‌ದೇವ್ ಆಯುರ್ವೇದ ಉತ್ಪನ್ನವಾಗಿರುವ ಬಂಜೆತನ ನಿವಾರಣೆ ಔಷಧಕ್ಕೆ ಸಂಬಂಧಿಸಿದ ತನಿಖಾ ಸಮಿತಿಯು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಅದು ವರದಿ ರಾಮ್ ದೇವ್ ಅವರಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ.

ಪುತ್ರ ಸಂತಾನದ ಭರವಸೆಯನ್ನು ನೀಡುವ ಬಂಜೆತನ ನಿವಾರಣೆ ಔಷಧ 'ಪುತ್ರಜೀವಕ್ ಬೀಜ್'ಗೆ ಸಂಬಂಧಿಸಿದಂತೆ ವ್ಯಾಪಕ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಉತ್ತರಾಖಂಡ್ ಸರಕಾರವು ಕಳೆದ ವರ್ಷ ಮೂವರು ಸದಸ್ಯರ ಸಮಿತಿ ರಚಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು.

ಸಮಿತಿಯು ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ವರದಿ ಸಲ್ಲಿಸಿದ್ದು, ಅದು ರಾಮ್‌ದೇವ್ ಅವರ ಪರವಾಗಿ ಇಲ್ಲ. ಸಿಎಂ ಸಮ್ಮತಿಸಿದ ಬಳಿಕ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಮುಖ್ಯ ಕಾರ‌್ಯದರ್ಶಿ ಓಂ ಪ್ರಕಾಶ್ ಹೇಳಿದರು.

ಈ ಔಷಧವನ್ನು ನಿಷೇಧಿಸಬೇಕು ಮತ್ತು ಉತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಳೆದ ಮೇ ತಿಂಗಳಲ್ಲಿ ಜೆಡಿಯು ಸಂಸದ ಕೆ.ಸಿ.ತ್ಯಾಗಿ ಆಗ್ರಹಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಮಿತಿ ರಚಿಸುವಂತೆ ಕೇಂದ್ರವು ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು.

SCROLL FOR NEXT