ಕನ್ನಯ್ಯ ಕುಮಾರ್ 
ದೇಶ

ಕನ್ನಯ್ಯ ಕುಮಾರ್ ಗೌರವ ಸಲ್ಲಿಸಿದ್ದ ಮೂರ್ತಿಯನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿದ ಎಬಿವಿಪಿ ಕಾರ್ಯಕರ್ತರು

ಜವಹರಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಹೂ ಹಾರ ಹಾಕಿ ಗೌರವ ಸಲ್ಲಿಸಿದ್ದ ಖ್ಯಾತ...

ಪಾಟ್ನಾ: ಜವಹರಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್  ಹೂ ಹಾರ ಹಾಕಿ ಗೌರವ ಸಲ್ಲಿಸಿದ್ದ ಖ್ಯಾತ ಕವಿ ದಿನಕರ್ ಅವರ ಮೂರ್ತಿಗೆ ಎಬಿವಿಪಿ ಮತ್ತು ಬಜರಂಗ ದಳದ ಕಾರ್ಯಕರ್ತರು ಬಿಹಾರದ ಬೆಗುಸರೈ ಜಿಲ್ಲೆಯಲ್ಲಿ ಗಂಗಾಜಲದಿಂದ ಸ್ವಚ್ಛಗೊಳಿಸಿದ ಘಟನೆ ನಡೆದಿದೆ.

ಮೂರ್ತಿ ಸ್ವಚ್ಛಗೊಳಿಸಿದ್ದು ಮಾತ್ರವಲ್ಲದೆ ಎಬಿವಿಪಿ ಕಾರ್ಯಕರ್ತರು ಹವನ ಪೂಜೆಯನ್ನು ಮಾಡಿಸಿ ಕನ್ನಯ್ಯ ಕುಮಾರ್ ಮೊನ್ನೆ ಗುರುವಾರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸ್ಥಳದಲ್ಲಿ ಗಂಗಾಜಲವನ್ನು ಪ್ರೋಕ್ಷಿಸಿದ್ದಾರೆ.

ದೇಶದ್ರೋಹದ ಆರೋಪ ಎದುರಿಸುತ್ತಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಇಲ್ಲಿ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಇಷ್ಟೆಲ್ಲಾ ಆದರೂ ಕೂಡ, ಬಹಳ ಸಮಯಗಳ ನಂತರ ಬಿಹಾರದ ಬೆಗುಸರೈಯಲ್ಲಿ ಹಬ್ಬದ ವಾತಾವರಣ ನಿನ್ನೆ ನೆಲೆ ಮಾಡಿತ್ತು. ದೇಶದ್ರೋಹದ ಆರೋಪದ ಮೇಲೆ ಬಂಧನವಾಗಿ ಜಾಮೀನಿನ ಮೇಲೆ ಹೊರಬಂದ ನಂತರ ಮೊದಲ ಬಾರಿಗೆ ಕನ್ನಯ್ಯ ಕುಮಾರ್ ತನ್ನ ತವರೂರಿಗೆ ಭೇಟಿ ನೀಡಿದ್ದನು. ಕನ್ನಯ್ಯನ ಭೇಟಿ ಸಂದರ್ಭದಲ್ಲಿ ಆತನ ಪೋಷಕರು, ಕುಟುಂಬಸ್ಥರು, ನೆರೆಹೊರೆಯವರು, ಗ್ರಾಮಸ್ಥರ ಮುಖದಲ್ಲಿ ಹಬ್ಬದ ಸಡಗರ ನೆಲೆಸಿತ್ತು.

''ಇಂದು ನಮಗೆ ಮಾತ್ರವಲ್ಲದೆ, ಇಡೀ ಗ್ರಾಮಕ್ಕೆ ಸಡಗರ, ಸಂಭ್ರಮ. ಬಹಳ ಸಮಯಗಳ ನಂತರ ಕನ್ನಯ್ಯ ಬಂದಿದ್ದಾನೆ ಎಂದು ಆತನ ತಂದೆ ಜೈಶಂಕರ್ ಸಿಂಗ್ ಹೇಳಿದರು. ಸುಮಾರು 60 ವರ್ಷ ವಯಸ್ಸಿನ ಅವರೀಗ ಪಾರ್ಶ್ವವಾಯು ಪೀಡಿತರಾಗಿದ್ದಾರೆ.
ನಾನು ನನ್ನ ಮಗನಿಗೆ ಕೆಲವು ವಿಶೇಷ ತಿಂಡಿ-ತಿನಿಸುಗಳನ್ನು ಮಾಡುತ್ತೇನೆ ಎಂದರು ಕನ್ನಯ್ಯ ತಾಯಿ ಮೀನಾ. ಅವರು ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಂಸತ್ತು ಮೇಲಿನ ದಾಳಿ ರೂವಾರಿ ಅಫ್ಜಲ್ ಗುರುವಿಗೆ ಮರಣದಂಡನೆ ನೀಡಿದ್ದನ್ನು ವಿರೋಧಿಸಿ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಪಟ್ಟಂತೆ ಕನ್ನಯ್ಯ ಕುಮಾರ್ ನನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಮಾರ್ಚ್ ನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್