ದೇಶ

ಕುರಾನ್ ಅಪವಿತ್ರಗೊಳಿಸಿದ ಪ್ರಕರಣ: ಶಾಸಕ ನರೇಂದ್ರ ಯಾದವ್ ಬಂಧನ ಸಾಧ್ಯತೆ

Shilpa D

ಸಂಗೂರ್: ಪವಿತ್ರ ಗ್ರಂಥ ಕುರಾನ್‌ ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ನರೇಶ್‌ ಯಾದವ್‌ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿರುವ ಪ್ರಮುಖ ಆರೋಪಿ ವಿಜಯ್‌ ಕುಮಾರ್‌ ಎಂಬಾತ ವಿಚಾರಣೆ ವೇಳೆ ನರೇಶ್‌ ಯಾದವ್‌ ಅವರ ಆಣತಿಯಂತೆ ನಾನು ಗ್ರಂಥವನ್ನು ಹರಿದಿದ್ದೆ ಎಂದು ಮಾಹಿತಿ ನೀಡಿರುವ ಕಾರಣ ಪೋಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

ಧರ್ಮಗ್ರಂಥವೊಂದನ್ನು ಅಪವಿತ್ರಗೊಳಿಸಿ ದೊಂಬಿ, ಗಲಭೆಗೆ ಕಾರಣವಾಗುವಂತಹ ಕೆಲಸಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ನರೇಶ್‌ ಯಾದವ್‌ ರನ್ನು ಬಂಧಿಸುವ ಸಾಧ್ಯತೆಗಳಿವೆ.

ಈ ಕೃತ್ಯ ಎಸಗಲು ನನಗೆ 1 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿತ್ತು ಎಂದು ವಿಜಯ್‌ ಕುಮಾರ್‌ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಈಗಾಗಲೇ ಪೋಲೀಸರು ವಿಜಯ್‌ ಕುಮಾರ್‌ ಜೊತೆಗೆ ನಂದ ಕಿಶೋರ್‌ ಮತ್ತು ಗೌರವ್‌ ಎನ್ನುವರರನ್ನು ವಶಕ್ಕೆ ಪಡೆದಿದ್ದಾರೆ.

SCROLL FOR NEXT