ದೇಶ

ರಥೋತ್ಸವ ಮುನ್ನಾದಿನ 100 ಮರಳಿನ ರಥ ನಿರ್ಮಿಸಿದ ಪಟ್ನಾಯಕ್

Lingaraj Badiger
ಭುವನೇಶ್ವರ: ಓಡಿಶಾದ ಪುರಿ ಜಗನ್ನಾಥ ರಥೋತ್ಸವದ ಮುನ್ನಾದಿನ ಖ್ಯಾತ ಮರುಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಹತ್ತಿರದ ಬೀಚ್​ನಲ್ಲಿ ತಮ್ಮ 25 ಜನ ವಿದ್ಯಾರ್ಥಿಗಳೊಂದಿಗೆ 100 ಮರಳಿನ ರಥ ನಿರ್ಮಿಸಿ ಗಮನ ಸೆಳೆದಿದ್ದಾರೆ.
ಪುರಿ ಜಗನ್ನಾಥನ ಜಗತ್​ಪ್ರಸಿದ್ಧ ಕಟ್ಟಿಗೆಯ ರಥಯಾತ್ರೆ ನೋಡಲು ಬಂದ ಭಕ್ತ ಸಮೂಹಕ್ಕೆ ಮರುಳು ರಥಗಳು ಆಕರ್ಷಿಸಿದವು. ಶುಕ್ರವಾರದಿಂದ ರಥ ನಿರ್ವಿುಸುವ ಕಾರ್ಯ ಆರಂಭಿಸಿದ ಪಟ್ನಾಯಕ್ ಮತ್ತು ತಂಡ ಮಂಗಳವಾರ ಮದ್ಯಾಹ್ನದ ವೇಳೆಗೆ 100 ರಥಗಳನ್ನು ನಿರ್ಮಿಸಿದ್ದಾರೆ.
ಓಡಿಶಾ ಪ್ರವಾಸೋದ್ಯಮದ ಸಚಿವ ಅಶೋಕ್ ಚಂದ್ರ ಪಂಡಾ ಅವರು ಇಂದು ಮರುಳು ರಥಗಳನ್ನು ಉದ್ಘಾಟಿಸಿದರು.
ಪಟ್ನಾಯಕ್ ಮತ್ತು ಅವರ ತಂಡ 800 ಮರುಳು ಚೀಲಗಳಲ್ಲಿ 20 ತಾಸು ಕೆಲಸ ಮಾಡಿ ಈ ಸಾಧನೆ ಮಾಡಿದ್ದಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿರುವ ಪಟ್ನಾಯಕ್ ಈಗಾಗಲೇ ಲಿಮ್ಕಾ ಬುಕ್​ನಲ್ಲಿ 20 ಬಾರಿ ಪ್ರವೇಶ ಗಿಟ್ಟಿಸಿದ್ದಾರೆ.
SCROLL FOR NEXT