ಗುವಾಹಟಿ: ಅನೇಕ ವರ್ಷಗಳ ಕಾಲ ಈಶಾನ್ಯ ಭಾಗದ ಉಗ್ರಗಾಮಿಗಳು ಸಾರ್ವಜನಿಕರಿಂದ ಬೆಂಬಲ ಪಡೆಯಲು ಸಾಮಾಜಿಕ ತಾಣವನ್ನು ಬಳಸಿಕೊಂಡು ಬಂದಿದ್ದಾರೆ. ಇದೀಗ ತಮ್ಮ ಪರವಾಗಿ ಸಾರ್ವಜನಿಕರಿಂದ ಹಣ ಕಿತ್ತುಕೊಳ್ಳಲು ಯುವಕರಿಗೆ ಉದ್ಯೋಗ ನೀಡಲು ಸಾಮಾಜಿಕ ತಾಣವನ್ನು ವೇದಿಕೆಯನ್ನಾಗಿ ಬಳಸಿಕೊಂಡಿದ್ದಾರೆ.
ಕಳೆದೊಂದು ವಾರದಲ್ಲಿ ಅಸ್ಸಾಂ ಪೊಲೀಸರು ಈ ಸಂಬಂಧ ಪಿಂಕುಂಶ್ ನರ್ಜರಿ ಎಂಬ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ರಾಷ್ಟ್ರೀಯ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊದೊಲಾಂಡ್ ಉಗ್ರಗಾಮಿ(ಎನ್ ಡಿಎಫ್ ಬಿ) ಸಂಗ್ ಬಿಜಿತ್ ಬಣ ಬಳಸಿಕೊಂಡು ಶಾಲೆ-ಕಾಲೇಜುಗಳ ಶಿಕ್ಷಕರಿಂದ ಹಣ ಕಿತ್ತುಕೊಳ್ಳಲು ಬಳಸಿಕೊಂಡಿತ್ತು.
ಕಾಲೇಜು ಉಪನ್ಯಾಸಕನಾಗಿ ಎನ್ ಡಿಎಫ್ ಬಿಯ ಪ್ರಧಾನ ಕಾರ್ಯದರ್ಶಿಯಾದ ತೆರಂಗ ಬಾಸುಮತರಿ ಎರಡು ನಕಲಿ ಫೇಸ್ ಬುಕ್ ಅಕೌಂಟ್ ಗಳನ್ನು ತೆರೆದಿದ್ದ. ಅದರಲ್ಲಿ ಪಿಂಕುಶ್ ಆತನ ಸ್ನೇಹಿತನಾಗಿದ್ದ. ಬಂಧಿತರಾದ ಇನ್ನು ಮೂವರಲ್ಲಿ ತೆರಂಗನ ಪತ್ನಿ ಮೋನಿಕಾ ಬಾಸುಮತರಿ ಮತ್ತು ಇಬ್ಬರು ಕಾಲೇಜು ಉಪನ್ಯಾಸಕರಾದ ಪ್ರದೀಪ್ ನರ್ಜರಿ ಮತ್ತು ಜಿತೇಂದ್ರ ನರ್ಜರಿ ಸೇರಿದ್ದಾರೆ.
ತೆರಂಗಾನಿಗೆ ಎರಡು ಫೇಸ್ ಬುಕ್ ಖಾತೆಗಳಲ್ಲಿ 3 ಸಾವಿರದ 609 ಮಂದಿ ಸ್ನೇಹಿತರಿದ್ದರು. ಈ ಖಾತೆಯನ್ನು ಕೆಲ ತಿಂಗಳ ಹಿಂದೆ ತೆರೆದಿರಬೇಕು. ಪಿಂಕುಶ್ ಜೊತೆ ಸ್ನೇಹವಾದ ನಂತರ ಶಾಲೆ ಕಾಲೇಜುಗಳಿಂದ ಶಿಕ್ಷಕರಿಂದ ಹಣ ಕಿತ್ತುಕೊಳ್ಳುವಂತೆ ಯುವಕರಿಗೆ ಉದ್ಯೋಗ ನೀಡುತ್ತಿದ್ದ ಎಂದು ಪೊಲೀಸ್ ಮಹಾ ನಿರ್ದೇಶಕ ಎಲ್.ಆರ್.ಬಿಶ್ನೊಯಿ ತಿಳಿಸಿದ್ದಾರೆ.
ಶಿಕ್ಷಕರಿಂದ ಕಿತ್ತುಕೊಂಡ ಹಣವನ್ನು ಪಿಂಕುಶ್ ಎರಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗಳಲ್ಲಿ ಠೇವಣಿ ಇಡುತ್ತಿದ್ದ. ಅದನ್ನು ನಾಗಲ್ಯಾಂಡ್ ನಲ್ಲಿ ಗಡಿ ಮಯನ್ಮಾರ್ ನಲ್ಲಿ ಹಣ ತೆಗೆಯಲಾಗುತ್ತಿತ್ತು. ತೆರಂಗಾ ಎನ್ ಡಿಎಫ್ ಬಿಗೆ 2013ರಲ್ಲಿ ಸೇರುವ ಮುನ್ನ ಅಸ್ಸಾಂನ ಚಿರಂಗ್ ಜಿಲ್ಲೆಯಲ್ಲಿ ಕಾಲೇಜು ಉಪನ್ಯಾಸಕನಾಗಿದ್ದ. ಎನ್ ಡಿಎಫ್ ಬಿಗೆ ಸೇರಿದ ಕೆಲವೇ ದಿನಗಳಲ್ಲಿ ಅದರ ಪ್ರಧಾನ ಕಾರ್ಯದರ್ಶಿಯಾದ. ನಂತರ ಆ ಬಣದ ಮುಖ್ಯ ಕಮಾಂಡರ್ ಇನ್ ಚೀಫ್ ಆದ ಎಂದು ಬಿಶ್ನೊಯಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos