ದೇಶ

ಗೌರವ ರಕ್ಷಿಸಿಕೊಳ್ಳಲು ಇರಾನಿಯನ್ನು ವರ್ಗಾವಣೆ ಮಾಡಿದ್ದಾರೆ ಮೋದಿ: ಸಂದೀಪ್ ದೀಕ್ಷಿತ್

Manjula VN

ನವದೆಹಲಿ: ಸ್ಮೃತಿ ಇರಾನಿಯವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿ ಮಾಡಿ ಸಾಕಷ್ಟು ಮುಜುಗರಕ್ಕೊಳಗಾಗಿದ್ದ ಮೋದಿಯವರು ತಮ್ಮ ಗೌರವವನ್ನು ರಕ್ಷಿಸಿಕೊಳ್ಳಲು ಈ ಬಾರಿ ಇರಾನಿಯವರಿಗೆ ಜವಳಿ ಖಾತೆಯನ್ನು ನೀಡಿದ್ದಾರೆಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು ಬುಧವಾರ ಹೇಳಿದ್ದಾರೆ.

ಕೇಂದ್ರ ಸಂಪುಟ ಪುನಾರಚನೆಯಲ್ಲಾದ ಬದಲಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂದೀಪ್ ದೀಕ್ಷಿತ್ ಅವರು, ಸ್ಮೃತಿ ಇರಾನಿಯವರು ಅತ್ಯಂತ ಕೆಟ್ಟ ಶಿಕ್ಷಣ ಸಚಿವೆಯಾಗಿದ್ದರು. ಹೀಗಾಗಿ ತಮ್ಮ ಗೌರವವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇರಾನಿಯವರ ಖಾತೆಯನ್ನು ಬದಲಾವಣೆ ಮಾಡಿದ್ದಾರೆಂದು ಹೇಳಿದ್ದಾರೆ.

ಇದೇ ವೇಳೆ ಜವಡೇಕರ್ ಅವರಿಗೆ ಖಾತೆ ನೀಡಿರುವ ಕುರಿತಂತೆ ಮಾತನಾಡಿರುವ ಅವರು, ಪರಿಸರ ಸಚಿವರಾಗಿದ್ದ ಜವಡೇಕರ್ ಅವರು ಸಾಕಷ್ಟು ವಿವಾದಕ್ಕೊಳಗಾಗಿದ್ದರು. ಜವಡೇಕರ್ ಅವರು ಅರಣ್ಯ ವಿರೋಧಿ ಸಚಿವರಾಗಿದ್ದರು. ಉದ್ಯಮಗಳ ಪರವಾಗಿದ್ದ ಅವರು, ಉದ್ಯಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಪರಿಸರ ನಾಶ ಮಾಡಿದ್ದರು. ಇದೀಗ ಶಿಕ್ಷಣ ವಲಯದಲ್ಲಿ ಮುಂದೇನು ಮಾಡುತ್ತಾರೆಂಬುದನ್ನು ಕಾದು ನೋಡಬೇಕಿದೆ. ಜವಡೇಕರ್ ಅವರು ಉತ್ತಮ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆಂದು ನನಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.

SCROLL FOR NEXT