ನವದೆಹಲಿ; ರಾಜ್ಯ ಸಭೆ ಸದಸ್ಯೆ ಸ್ಮೃತಿ ಇರಾನಿ ಅವರಿಗೆ ಮಾನವ ಸಂಪನ್ಮೂಲ ಖಾತೆಯಿಂದ ಕಡಿಮೆ ದರ್ಜೆಯ ಜವಳಿ ಖಾತೆ ನೀಡಿರುವುದಕ್ಕೆ ಹಲವು ಟೀಕೆಗಳು ಬಂದ ಬೆನ್ನಲ್ಲೇ ಜೆಡಿಯ ಮುಖಂಡ ಅನ್ವರ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸ್ಮತಿ ಇರಾನಿ ಅವರಿಗೆ ಜವಳಿ ಖಾತೆ ನೀಡಿರುವುದು ಒಳ್ಳೆಯದ್ದೇ ಆಯಿತು. ಇದರಿಂದ ಅವರ ಮೈಮುಚ್ಚಲು ಸಹಾಯವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆಂದು ಖಾಸಗಿ ಚಾನೆಲ್ ವೊಂದು ವರದಿ ಮಾಡಿದೆ.
ಅನ್ವರ್ ಅಲಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಬದಲಾಯಿಸಿರುವ ಅಲಿ, ನಾನು ಹೇಳಿದ್ದು, ಇರಾನಿ ಅವರಿಗಲ್ಲ ಜನರ ದೇಹ ಮುಚ್ಚಲು ಸಹಾಯವಾಗುತ್ತದೆ ಎಂಬ ರೀತಿಯಲ್ಲಿ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಜನತಾದಳ (ಯು) ನಾಯಕ ಅಲಿ ಅನ್ವರ್ ಅವರು ಸ್ಮೃತಿ ಇರಾನಿ ಬಗ್ಗೆ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಜಾವಡೇಕರ್, ‘ಇದು ನಾನು ಕೇಳಿದ ಅತ್ಯಂತ ಕೆಟ್ಟ ಟೀಕೆ’ ಎಂದು ಟಾಂಗ್ ನೀಡಿದರು.