ಸಾಂದರ್ಭಿಕ ಚಿತ್ರ 
ದೇಶ

ದೆಹಲಿ: 1,500 ಸ್ತ್ರೀಯರಿಗೆ ಅಶ್ಲೀಲ ಮೆಸೇಜ್, ಆರೋಪಿ ಅಂದರ್

1, 500 ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ 31 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ...

ನವದೆಹಲಿ: 15,00 ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ 31 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್ ಫೋನ್ ಮೂಲಕ 1500ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ಸಂದೇಶ ರವಾನಿಸಿದ್ದ ದೆಹಲಿಯ ಆರೋಪಿ ಮೊಹಮ್ಮದ್ ಖಾಲಿದ್ ಎಂಬಾತನನ್ನು  ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಈತ ವಿವಿಧ ಮೊಬೈಲ್ ಸಿಮ್ ಬಳಸಿ ಮನಸ್ಸಿಗೆ ಬಂದ ಸಂಖ್ಯೆಗೆ ಕರೆ ಮಾಡುತ್ತಿದ್ದ. ಮಹಿಳಾ ದನಿ ಉತ್ತರಿಸಿದರೆ ಆ ಸಂಖ್ಯೆ ಸಂಗ್ರಹ ಮಾಡಿಕೊಂಡು ಮೆಸೇಜ್ ಮತ್ತು ವಾಟ್ಯಾಪ್ ಮೂಲಕ ಅಶ್ಲೀಲ ಸಂದೇಶ ರವಾನೆ ಮಾಡುತ್ತಿದ್ದ.

ಅಶೋಕ್ ವಿಹಾರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದಾಖಲಿಸಿದ್ದ ದೂರಿನ ಅನ್ವಯ ಪೊಲೀಸರು ಬಂಧಿಸಿದ್ದಾರೆ. ದೂರು ನೀಡಿದ ಮಹಿಳೆಗೆ ಆರೋಪಿಯ ಎರಡು ನಂಬರ್ ಗಳಿಂದ ಅಶ್ಲೀಲ ಸಂದೇಶಗಳು ಬಂದಿದ್ದವು, ಆಕೆ ವಾಪಸ್ ಫೋನ್ ಮಾಡಿದಾಗ , ಆಕೆಯ ಫೋಟೋ ಹಾಗೂ ಮೊಬೈಲ್ ನಂಬರ್ ಗಳನ್ನು ಪೋರ್ನ್ ಸೈಟ್ ಗೆ ಅಪ್ ಲೋಡ್ ಮಾಡುವುದಾಗಿ  ಬೆದರಿಸಿದ್ದ.

ಪೊಲೀಸರು ಆತನ ನಂಬರ್ ಪರಿಶೀಲಿಸಿದಾಗ ನಕಲಿ ವಿಳಾಸ ನೀಡಿ ಆತ ನಂಬರ್ ಖರೀದಿಸಿದ್ದ ಎಂಬದು ತಿಳಿದು ಬಂದಿದೆ.

ವಿವಿಧ ಮೊಬೈಲ್ ಕಂಪೆನಿಗಳಿಗೆ ಗ್ರಾಹಕರು ಸಲ್ಲಿಸಿದ್ದ ದೂರಿನನ್ವಯ ಪೊಲೀಸರು ಈತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಖಾಲಿದ್ ಮೊಬೈಲ್ ಫೋನ್ ಸೆಟ್​ನಲ್ಲಿ 2000 ಮಹಿಳೆಯರು ಮತ್ತು ಯುವತಿಯರ ಫೋನ್ ಸಂಖ್ಯೆಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯೂಯಾರ್ಕ್‌ ನಗರ: ಮೊದಲ ಮುಸ್ಲಿಂ ಮೇಯರ್ ಆಗಿ ಭಾರತೀಯ-ಅಮೆರಿಕನ್ ಜೋಹ್ರಾನ್ ಮಮ್ದಾನಿ ಆಯ್ಕೆ

ಅಮೆರಿಕದ ಕೆಂಟುಕಿಯಲ್ಲಿ ಟೇಕಾಫ್ ಆದ UPS cargo ವಿಮಾನ ಸ್ಫೋಟಗೊಂಡು ಪತನ: ಕನಿಷ್ಠ 3 ಸಾವು, 11 ಮಂದಿಗೆ ಗಾಯ-Video

ಮೊದಲು ಮತದಾನ ನಂತರ ಉಪಹಾರ: ಮಹಿಳಾ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಮಂತ್ರ!

ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿ.ಕೆ. ಶಿವಕುಮಾರ್

ಅಮೆರಿಕಾದಲ್ಲಿ ಟ್ವಿನ್ ಟವರ್ ದಾಳಿ ನಂತರ ಇಡೀ ಪ್ರಪಂಚದಲ್ಲಿಯೇ ಬೆಂಗಳೂರು ಸುರಕ್ಷಿತ ಜಾಗ: ಡಿ.ಕೆ.ಶಿವಕುಮಾರ್

SCROLL FOR NEXT