ಮೃತ ತಾಯಿ ಆನೆ ಬಳಿ ರೋಧಿಸುತ್ತಿರುವ ಮರಿ ಆನೆ 
ದೇಶ

ಆಕಸ್ಮಿಕವಾಗಿ ಸತ್ತ ತಾಯಿ ಆನೆಯನ್ನು ಎಬ್ಬಿಸುತ್ತಿರುವ ಮರಿ ಆನೆ

ಆಕಸ್ಮಿಕವಾಗಿ ಸಾವನ್ನಪ್ಪಿದ ತನ್ನ ತಾಯಿ ಆನೆಯನ್ನು ಮರಿ ಆನೆಯೊಂದು ಎಬ್ಬಿಸಲು ಪ್ರಯತ್ನಿಸುತ್ತಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ...

ಕೊಯಮತ್ತೂರು: ಆಕಸ್ಮಿಕವಾಗಿ ಸಾವನ್ನಪ್ಪಿದ ತನ್ನ ತಾಯಿ ಆನೆಯನ್ನು ಮರಿ ಆನೆಯೊಂದು ಎಬ್ಬಿಸಲು ಪ್ರಯತ್ನಿಸುತ್ತಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಕೊಯಮತ್ತೂರಿನ ಪಲ್ಲಂ ಅರಣ್ಯ ಪ್ರದೇಶದ ಕಾವಾಡಿಯಮ್ಮಲ್ ದೇಗುಲದ ಪ್ರದೇಶದಲ್ಲಿ ಆಹಾರಕ್ಕಾಗಿ ಆಗಮಿಸಿದ್ದ ತಾಯಿ ಆನೆ, ಅಲ್ಲಿನ ಕಂದಕವನ್ನು ಗಮನಿಸದೇ ಕೆಳಕ್ಕೆ  ಉರುಳಿದೆ. ಕೆಳಕ್ಕೆ ಉರುಳುತ್ತಿದ್ದಂತೆಯೇ ತಾಯಿ ಆನೆ ಸಾವನ್ನಪ್ಪಿದ್ದು, ಕೂಡಲೇ ಕೆಳಕ್ಕೆ ತೆರಳಿದ ಮರಿ ಆನೆ ತಾಯಿ ಆನೆಯನ್ನು ಎಬ್ಬಿಸಲು ಪ್ರಯತ್ನಿಸಿದೆ. ಮರಿ ಆನೆಯ ಕೂಗಾಟ ಕೇಳಿದ  ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರೊಬ್ಬರು ಮರಿ ಆನೆ ತನ್ನ ತಾಯಿಯನ್ನು ಎಬ್ಬಿಸುತ್ತಿರುವ ದೃಶ್ಯಾವಳಿಯನ್ನು ಚಿತ್ರೀಕರಿಸಿಕೊಂಡಿದ್ದಾರೆ.

ವಿಷಯ ತಿಳಿದ ಅರಣ್ಯ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕಾಗಮಿಸಿ ಮೃತ ಆನೆಯ ಶವವನ್ನು ತೆರವುಗೊಳಿಸಲು ಮುಂದಾದಾಗ ಸಿಬ್ಬಂದಿಗಳನ್ನೇ ಮರಿ ಆನೆ ಅಟ್ಟಾಡಿಸಿದ್ದು, ತಾಯಿ ಆನೆ ಬಳಿಗೆ  ಯಾರನ್ನು ಬಿಟ್ಟಿಲ್ಲ. ಸುಮಾರು 2 ಗಂಟೆಗಳ ಕಾಲ ಇದೇ ಸನ್ನಿವೇಶ ಮರುಕಳಿಸಿದ್ದು, ಅರಣ್ಯ ಸಿಬ್ಬಂದಿಗಳ ಹರಸಾಹಸದ ಬಳಿಕ ಮರಿ ಆನೆಯನ್ನು ತಾಯಿಯಿಂದ ಬೇರ್ಪಡಿಸುವಲ್ಲಿ ಅವರು  ಯಶಸ್ವಿಯಾಗಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಥಳೀಯ ಅರಣ್ಯಾಧಿಕಾರಿಯೊಬ್ಬರು ಇಂತಹ ಸನ್ನಿವೇಶ ಸಾಮಾನ್ಯವಾಗಿದ್ದು, ತಾಯಿ ಆನೆ ಬೇರ್ಪಟ್ಟಾಗ ಅಥವಾ ಸಾವನ್ನಪ್ಪಿದಾಗ ಮರಿ ಆನೆ  ವಿಚಲಿತಗೊಳ್ಳುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಮೃತ ಆನೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಂತರಿಕ ರಕ್ತಸ್ರಾವದಿಂದಾಗಿ ಆನೆ ಮೃತಪಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಯಿಗಾಗಿ ರೋಧಿಸುತ್ತಿರುವ ಮರಿ ಆನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!