ನವದೆಹಲಿ: ಬಾಂಗ್ಲಾದೇಶದ ಗಡಿ ಮೂಲಕ 10 ಉಗ್ರರ ಗುಂಪೊಂದು ಭಾರತದ ಗಡಿಗೆ ಬಂದಿದ್ದು, ಎಚ್ಚರದಿಂದಿರುವಂತೆ ಬಾಂಗ್ಲಾದೇಶ ಸರ್ಕಾರ ಭಾನುವಾರ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ಉಗ್ರರ ಗುಂಪೊಂದು ಗಡಿ ದಾಟಿ ಭಾರತದೊಳಗೆ ನುಸುಳಿಸಿದ್ದು, ಕಟ್ಟೆಚ್ಚರ ವಹಿಸುವಂತೆಬಾಂಗ್ಲೇದೇಶ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ಹೇಳಿದೆ, ಅಲ್ಲದೆ, ನುಸುಳಿರುವ ಉಗ್ರರ ಪಟ್ಟಿಯೊಂದನ್ನು ಬಾಂಗ್ಲಾದೇಶ ಭಾರತಕ್ಕೆ ನೀಡಿದೆ ಎಂದು ವರದಿಯಲ್ಲಿ ತಿಳಿಸಿದೆ.
ಬಾಂಗ್ಲಾದೇಶ ಸರ್ಕಾರ ನೀಡಿರುವ ಎಚ್ಚರಿಕೆ ಸಂದೇಶದಿಂದಾಗಿ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಮೂಲಗಳ ಪ್ರಕಾರ ಡಾಕಾ ಮೇಲೆ ದಾಳಿ ಮಾಡಿದ ಉಗ್ರರೇ ಗಡಿ ನುಸುಳಿದ್ದಾರೆಂದು ಹೇಳಲಾಗುತ್ತಿದ್ದು, ಈಗಾಗಲೇ ಗಡಿ ನುಸುಳಿರುವ ಉಗ್ರರ ಫೋಟೋದೊಂದಿಗೆ ಅವರ ಮಾಹಿತಿಯನ್ನು ಬಾಂಗ್ಲಾದೇಶದ ಸರ್ಕಾರ ಭಾರತಕ್ಕೆ ನೀಡಿದೆ ಎಂದು ತಿಳಿದುಬಂದಿದೆ.