ಎನ್ ಕೌಂಟರ್ ನಲ್ಲಿ ಹತ್ಯೆಗಿಡಾದ ಉಗ್ರ ಮುಜಾಫರ್ ವಾನಿ ಕೊನೆಯ ಟ್ವೀಟ್ ಮಾಡಿದ್ದು ಜಾಕಿರ್ ನಾಯಕ್ ಬಗ್ಗೆ!
ಸೇನಾ ಪಡೆ ಎನ್ ಕೌಂಟರ್ ಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಮುಜಾಫರ್ ವಾನಿ ಸಹ ಜಾಕಿರ್ ನಾಯಕ್ ಗೆ ಬೆಂಬಲ ನೀಡಿದ್ದ ವಿಷಯ ಬಹಿರಂಗವಾಗಿದೆ.
ನವದೆಹಲಿ: ಮುಂಬೈ ಮೂಲದ ಇಸ್ಲಾಮ್ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಬಾಂಗ್ಲಾದ ಉಗ್ರರಿಗೆ ಸ್ಫೂರ್ತಿಯಾಗಿದ್ದ ವಿಷಯ ಬಹಿರಂಗವಾದ ಬೆನ್ನಲ್ಲೇ ಕಾಶ್ಮೀರದಲ್ಲಿ ಸೇನಾ ಪಡೆ ಎನ್ ಕೌಂಟರ್ ಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಮುಜಾಫರ್ ವಾನಿ ಸಹ ಜಾಕಿರ್ ನಾಯಕ್ ಗೆ ಬೆಂಬಲ ನೀಡಿದ್ದ ವಿಷಯ ಬಹಿರಂಗವಾಗಿದೆ.