ಸಾಂದರ್ಭಿಕ ಚಿತ್ರ 
ದೇಶ

ಹವಾಮಾನ ವೈಪರೀತ್ಯದಿಂದ 2030ರ ವೇಳೆಗೆ 2 ಲಕ್ಷಕ್ಕೂ ಅಧಿಕ ಮಂದಿ ಸಾವು: ವಿಶ್ವ ಆರೋಗ್ಯ ಸಂಸ್ಥೆ

2030ರ ಹೊತ್ತಿಗೆ ಸುಮಾರು 2 ಲಕ್ಷದ 50 ಸಾವಿರಕ್ಕೂ ಅಧಿಕ ಜನರು ಹವಾಮಾನ ಬದಲಾವಣೆಯಿಂದ ಪ್ರತಿ ವರ್ಷ ಸಾಯಲಿದ್ದಾರೆ...

ನವದೆಹಲಿ: 2030ರ ಹೊತ್ತಿಗೆ ಸುಮಾರು 2 ಲಕ್ಷದ 50 ಸಾವಿರಕ್ಕೂ ಅಧಿಕ ಜನರು ಹವಾಮಾನ ಬದಲಾವಣೆಯಿಂದ ಪ್ರತಿ ವರ್ಷ ಸಾಯಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇವುಗಳಲ್ಲಿ ಹೆಚ್ಚಿನ ಸಾವು ಅಪೌಷ್ಟಿಕತೆ, ಮಲೇರಿಯಾ, ಅತಿಸಾರ ಮತ್ತು ಶಾಖ ಒತ್ತಡದಿಂದ ಉಂಟಾಗಲಿದೆ ಎಂದು ಅದು ಹೇಳಿದೆ.
ಭೂಮಿಯು ಹೆಚ್ಚು ಬಿಸಿಯಾಗುತ್ತಿದ್ದಂತೆ ಜಾಗತಿಕ ಹವಾಮಾನ ಬದಲಾವಣೆಯಾಗುತ್ತದೆ. ಇದು ಮನುಷ್ಯನ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮವನ್ನುಂಟುಮಾಡಲಿದೆ. ಉದಾಹರಣೆಗೆ ಭೌಗೋಳಿಕ ವ್ಯಾಪ್ತಿ ಬದಲಾಗಿ ಕೆಲವು ಸಾಂಕ್ರಾಮಿಕ ರೋಗಗಳ ಋತುಗಳು ಬದಲಾದಂತೆ ಬರಲಿವೆ. ಇದು ಆಹಾರ ಉತ್ಪಾದನೆ ಪರಿಸರ ವ್ಯವಸ್ಥೆಯನ್ನು ಕದಡುತ್ತದೆ. ಇದರ ಪರಿಣಾಮ ಹವಾಮಾನದಲ್ಲಿ ಪದೇ ಪದೇ ಬದಲಾವಣೆಯಾಗುತ್ತಿರುತ್ತದೆ.
ಹವಾಮಾನ ಬದಲಾವಣೆಯ ಭಾರೀ ಪ್ರಮಾಣ ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ಬಡಜನರ ಮೇಲಾಗುತ್ತದೆ. ಜನರ ಮಧ್ಯೆ ಆರೋಗ್ಯದಲ್ಲಿ ಅಸಮತೋಲನ ಜಾಸ್ತಿಯಾಗುತ್ತದೆ.
21ನೇ ಶತಮಾನದ ಕೊನೆಯ ವೇಳೆಗೆ ಹವಾಮಾನ ಬದಲಾವಣೆ ಇನ್ನಷ್ಟು ಉಂಟಾಗಿ ಬರಗಾಲದ ತೀವ್ರತೆ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ತಲೆದೋರಲಿದೆ. ಹವಾಮಾನ ಬದಲಾವಣೆ 21ನೇ ಶತಮಾನದ ಅತಿದೊಡ್ಡ ಆರೋಗ್ಯ ಮಾರಕವಾಗಲಿದೆ.
ಅಧಿಕ ಉಷ್ಣಾಂಶ ಮತ್ತು ಹವಾಮಾನ ಬದಲಾವಣೆಯಿಂದಾಗಿ ಬರಗಾಲ ತಲೆದೋರಿ ಆಹಾರ ಪದಾರ್ಥಗಳ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಅನೇಕ ಬಡ ರಾಷ್ಟ್ರಗಳಲ್ಲಿನ ಮಕ್ಕಳು, ಮಹಿಳೆಯರಲ್ಲಿ ಪೌಷ್ಟಿಕಾಂಶ ಕೊರತೆ, ಆಹಾರದಲ್ಲಿ ಕೊರತೆಯುಂಟಾಗಲಿದೆ. ಪೌಷ್ಟಿಕಾಂಶ ಕೊರತೆಯಿಂದ ಪ್ರಸ್ತುತ 3.1 ದಶಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ.ಶುದ್ಧ ಗಾಳಿ, ಕುಡಿಯುವ ನೀರಿಗೆ ಕೂಡ ಪರಿಣಾಮ ಬೀರುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನ ಪ್ರಕಾರ ಅಧಿಕ ಉಷ್ಣತೆಗೆ ಮುಂದಿನ 15 ವರ್ಷಗಳಲ್ಲಿ 38 ಸಾವಿರ ಜನರು ಸಾವನ್ನಪ್ಪಲಿದ್ದಾರೆ. ಅತಿಸಾರದಿಂದ 48 ಸಾವಿರ ಮಂದಿ, ಮಲೇರಿಯಾದಿಂದ 60 ಸಾವಿರ ಮತ್ತು ಬಾಲ್ಯದಲ್ಲಿ ಪೌಷ್ಟಿಕಾಂಶ ಕೊರತೆಯಿಂದ 95 ಸಾವಿರ ಜನ ಸಾಯಬಹುದು ಎಂದು ಅಂದಾಜಿಸಿದೆ.
ಹವಾಮಾನ ಬದಲಾವಣೆ ಸಂಬಂಧಿ ರೋಗ ಮತ್ತು ಅಪಾಯಗಳಿಂದ ರಕ್ಷಿಸಿ ಜನರ ಆರೋಗ್ಯ ಸುಧಾರಿಸಲು ವಿಶ್ವ ಆರೋಗ್ಯ ಸಂಸ್ಥೆ ವಿಸ್ತಾರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT