ದೇಶ

ಬಿಎಸ್ ಪಿ ರಾಷ್ಟ್ರೀಯ ಕಾರ್ಯದರ್ಶಿ ಪರಮ್ ದೇವ್ ಯಾದವ್ ಪಕ್ಷಕ್ಕೆ ರಾಜಿನಾಮೆ

Srinivas Rao BV

ಲಖನೌ: ಉತ್ತರ ಪ್ರದೇಶ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಎಸ್ ಪಿ ಪಕ್ಷದಲ್ಲಿ ಭಿನ್ನಮತವು ಹೆಚ್ಚುತ್ತಿದ್ದು, ಪ್ರಮುಖ ನಾಯಕರ ರಾಜೀನಾಮೆ ಸರಣಿ ಮುಂದುವರೆದಿದೆ.

ಇತ್ತೀಚೆಗಷ್ಟೇ ಪಕ್ಷದ ಹಿರಿಯ ನಾಯಕ ರವೀಂದ್ರ ನಾಥ್ ತ್ರಿಪಾಠಿ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ, ಬಿಎಸ್ ಪಿ ರಾಷ್ಟ್ರೀಯ ಕಾರ್ಯದರ್ಶಿ ಪರಮ್ ದೇವ್ ಯಾದವ್ ರಾಜೀನಾಮೆ ನೀಡಿದ್ದಾರೆ. 35 ವರ್ಷಗಳ ಕಾಲ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದ ಪರಮ್ ದೇವ್ ಯಾದವ್, ಮಾಯಾವತಿ ಪಕ್ಷದಲ್ಲಿ ದಲಿತರ ಹಿತಾಸಕ್ತಿಗಳನ್ನು ಹಣವಿರುವವರಿಗೆ ಅಡ ಇಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಎಸ್ ಪಿ ಪಕ್ಷ ದುಡ್ಡು ಕೊಟ್ಟರೆ ಟಿಕೆಟ್ ಇಂದ ಹಿಡಿದು ಏನನ್ನು ಬೇಕಾದರೂ ಪಡೆಯಬಹುದಾದ ಅಂಗಡಿಯಂತಾಗಿದೆ, ಪಕ್ಷಕ್ಕೆ ನಿಷ್ಠೆ ಹೊಂದದೆ ಇರುವವರನ್ನು ಎಂಎಲ್ ಸಿ ಗಳನ್ನಾಗಿ ಮಾಡಲಾಗಿದೆ ಎಂದು ಪರಮ್ ದೇವ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಬಿಎಸ್ ಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಪರಮ್ ದೇವ್ ಯಾದವ್ ತಮ್ಮ ಮುಂದಿನ ರಾಜಕೀಯ ನಡೆಯನ್ನು ತಿಳಿಸಿಲ್ಲವಾದರೂ, ಬಿಜೆಪಿ ಸೇರುವ ಬಗ್ಗೆ ಸುಳಿವು ನೀಡಿದ್ದಾರೆ. ಮಾಯಾವತಿ ದಲಿತ ಸಿದ್ಧಾಂತದಿಂದ ದೂರವಾಗಿದ್ದಾರೆ ಎಂದು ಆರೋಪಿಸಿ ಕಳೆದ ವಾರ ಪಕ್ಷದ ಪ್ರಮುಖ ನಾಯಕ ರವೀಂದ್ರನಾಥ್ ತ್ರಿಪಾಠಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

SCROLL FOR NEXT