ದೇಶ

ಆರ್.ಕೆ.ಪಚೌರಿಗೆ ಜಾಮೀನು, ವಿದೇಶ ಪ್ರಯಾಣಕ್ಕೆ ಅನುಮತಿ

Lingaraj Badiger
ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ (ತೇರಿ) ನಿರ್ದೇಶಕ ಆರ್‌.ಕೆ. ಪಚೌರಿ ಅವರಿಗೆ ದೆಹಲಿ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದ್ದು, ವಿದೇಶ ಪ್ರಯಾಣಕ್ಕೆ ಅನುಮತಿ ಸಹ ನೀಡಿದೆ.
ಪ್ರಕರಣ ಸಂಬಂಧ ಇಂದು ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಶಿವಾನಿ ಚೌಹಾಣ್ ಅವರ ಮುಂದೆ ವಿಚಾರಣಗೆ ಹಾಜರಾದ ಪಚೌರಿ ಅವರಿಗೆ ಮ್ಯಾಕ್ಸಿಕೊ ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ ನೀಡಿದ್ದಾರೆ.
ಪ್ರಕರಣದ ತನಿಖೆ ಈಗಾಗಲೇ ಅಂತ್ಯವಾಗಿದೆ ಮತ್ತು ಚಾರ್ಜ್ ಶೀಟ್ ಸಹ ದಾಖಲಿಸಲಾಗಿದೆ. ಅಲ್ಲದೆ ತನಿಖೆಯ ವೇಳೆ ಆರೋಪಿಯನ್ನು ಬಂಧಿಸಿಲ್ಲ. ಹೀಗಾಗಿ ಅವರ ಬಂಧನ ಅಗತ್ಯ ಇಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಪಚೌರಿ ವಕೀಲ ಆಶಿಶ್ ದಿಕ್ಷಿತ್ ಅವರು ಜಾಮೀನು ಹಾಗೂ ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಶಿವಾನಿ ಚೌಹಾಣ್ ಅವರು, 50 ಸಾವಿರ ರುಪಾಯಿ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಸ್ಯೂರಿಟಿ ಮೇಲೆ ಆರೋಪಿಗೆ ಜಾಮೀನು ನೀಡಿದ್ದಾರೆ.
ಟೆರಿಯ ಸದಸ್ಯನಾಗಿ ನನ್ನ ಅವಧಿ 2016ರ ಮಾರ್ಚ್ 31ಕ್ಕೆ ಕೊನೆಗೊಂಡಿದೆ. ಸಂಸ್ಥೆಯಿಂದ ಹೊರಬಂದ್ದು, ಇತರ ಆಸಕ್ತಿಗಳಲ್ಲಿ ಕ್ರಿಯಾಶೀಲನಾಗುತ್ತೇನೆ ಎಂದು ಪಚೌರಿ ಹೇಳಿದ್ದಾರೆ. 
ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಚೌರಿ ವಿರುದ್ಧ ಈವರೆಗೆ ಮೂವರು ಮಹಿಳೆಯರು ದೂರು ದಾಖಲಿಸಿದ್ದಾರೆ. ನಿರೀಕ್ಷಣಾ ಜಾಮೀನಿನಲ್ಲಿರುವ ಆರ್.ಕೆ.ಪಚೌರಿ, ಲೈಂಗಿಕ ಕಿರುಕುಳ ಕೇಸಿಗೆ ಸಂಬಂಧಪಟ್ಟಂತೆ ಎರಡು ಬಾರಿ ವಿಚಾರಣೆಗೆ ಒಳಗಾಗಿದ್ದರು.
SCROLL FOR NEXT