ಪುರುಸವಲ್ಕಮ್ ನ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆಯಲ್ಲಿ ಭಕ್ತರು(ಸಾಂದರ್ಭಿಕ ಚಿತ್ರ) 
ದೇಶ

ದಕ್ಷಿಣ ಭಾರತೀಯರು ಹಿಂದೂ ಸಂಸ್ಕೃತಿಯ ರಾಯಭಾರಿಗಳು: ಭೂಪೀಂದ್ರ ಮೈತಾನಿ

ಭೂಪೇಂದ್ರ ಮೈತಾನಿ ಅವರು ಯಾವಾಗ ನೋಡಿದರೂ ಆ ಪುಟ್ಟ ಮಗು ವಿಷ್ಣು ಸಹಸ್ರನಾಮ ಅಥವಾ ಶ್ಲೋಕ ಪಠಿಸುವುದನ್ನು...

ಬದರಿನಾಥ್: ಭೂಪೇಂದ್ರ ಮೈತಾನಿ ಅವರು ಯಾವಾಗ ನೋಡಿದರೂ ಆ ಪುಟ್ಟ ಮಗು ವಿಷ್ಣು ಸಹಸ್ರನಾಮ ಅಥವಾ ಶ್ಲೋಕ ಪಠಿಸುವುದನ್ನು ನೋಡುತ್ತಾರೆ. ಆತ ದಕ್ಷಿಣ ಭಾರತದವನೆಂದು ಅವರಿಗೆ ವಿಚಾರಿಸಿದಾಗ ಗೊತ್ತಾಯಿತು. ''ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ದಕ್ಷಿಣ ಭಾರತವರು ಮಾತ್ರ ವಿಷ್ಣು ಸಹಸ್ರನಾಮವನ್ನು ಅಷ್ಟು ಸ್ಪಷ್ಟವಾಗಿ ಸರಾಗವಾಗಿ ಪಠಿಸುವುದನ್ನು ನೋಡಿದ್ದೇನೆ. ಉತ್ತರ ಭಾರತದವರಿಗಿಂತ ದಕ್ಷಿಣ ಭಾರತದವರು ಹೆಚ್ಚು ಧಾರ್ಮಿಕ ಮನೋಭಾವದವರಾಗಿರುತ್ತಾರೆ'' ಎನ್ನುತ್ತಾರೆ ಭೂಪೇಂದ್ರ.
ಅವರು ಪ್ರಖ್ಯಾತ ಬದರೀನಾಥ್ ಕೇದಾರನಾಥ್ ದೇವಸ್ಥಾನ ಸಮಿತಿಯ ಉಸ್ತುವಾರರಾಗಿದ್ದು, ಉತ್ತರಾಖಂಡ ಮೂಲದವರು. ಶ್ಲೋಕ, ದೇವರನಾಮ ಗೊತ್ತಿರುವ ಯಾತ್ರಿಕರನ್ನು ಬಹಳ ಆತ್ಮೀಯವಾಗಿ ಕಾಣುತ್ತಾರೆ. ಅವರ ಪ್ರಕಾರ ಬದರಿನಾಥ, ಕೇದಾರನಾಥ ದೇವಾಲಯಗಳಿಗೆ ದಕ್ಷಿಣದ ರಾಜ್ಯಗಳಿಂದ ತೆಲಂಗಾಣ, ಆಂಧ್ರ ಪ್ರದೇಶ, ಕೇರಳಗಳಿಂದ ಶೇಕಡಾ 85ರಷ್ಟು ಮಂದಿ ಯಾತ್ರಿಕರು ಪ್ರತಿವರ್ಷ ಭೇಟಿ ನೀಡುತ್ತಾರಂತೆ. ವರ್ಷದಿಂದ ವರ್ಷಕ್ಕೆ ದಕ್ಷಿಣದ ರಾಜ್ಯಗಳಿಂದ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅವರು.
ಇದಕ್ಕೆ ಕಾರಣವೇನೆಂದು ಅವರಲ್ಲಿ ಕೇಳಿದಾಗ, ''ನನ್ನ ಅನುಭವದ ಪ್ರಕಾರ ದಕ್ಷಿಣ ಭಾರತೀಯರಿಗೆ ದೇವರು, ಸಂಪ್ರದಾಯ, ಪೂಜೆ ಇತ್ಯಾದಿಗಳ ಮೇಲೆ ನಂಬಿಕೆ ಹೆಚ್ಚು. ದಕ್ಷಿಣ ಭಾರತದ ಹಿಂದೂ ಜನರು ಹಿಂದೂ ಧರ್ಮದ ಮೂಲ ಪ್ರಚಾರಕರು'' ಎಂದು ಬದರಿನಾಥ್ ಹೇಳುತ್ತಾರೆ.
ಉತ್ತರ ಭಾರತದವರು ಇಲ್ಲಿಗೆ ಮೋಜು, ಮಸ್ತಿ ಮಾಡಲು ಬರುತ್ತಾರೆ. ಕುಡಿಯುವುದು, ಸಿಗರೇಟು ಸೇದುವುದು, ಹನಿಮೂನ್ ಆಚರಿಸಲು ಇತ್ಯಾದಿಗೆ ಬರುತ್ತಾರೆ. ಭಾರತದ ಕಟ್ಟಕಡೆಯ ಗ್ರಾಮವಾದ(ಚೀನಾದ ಗಡಿಭಾಗ) ಮನಾಕ್ಕೆ ಹೋಗಿ ಫೋಟೋ ತೆಗೆದುಕೊಂಡು ಹೋಗುತ್ತಾರೆ. ಅದೇ ದಕ್ಷಿಣ ಭಾರತೀಯರು ಇಲ್ಲಿಗೆ ಭಕ್ತಿಯಿಂದ ಬರುತ್ತಾರೆ. 8-10 ವರ್ಷದ ಮಕ್ಕಳು ವಿಷ್ಣು ಸಹಸ್ರನಾಮ ಸುಲಲಿತವಾಗಿ ಹೇಳುವುದನ್ನು ನೀವು ಎಲ್ಲಿ ಕೇಳುತ್ತೀರಿ? ಎಳವೆಯಲ್ಲಿಯೇ ಮಕ್ಕಳಲ್ಲಿ ಇಂತಹ ಸಂಸ್ಕೃತಿ, ಸಂಸ್ಕಾರವನ್ನು ಬಿತ್ತುತ್ತಿರುವ ದಕ್ಷಿಣ ಭಾರತದ ಮಕ್ಕಳ ಪೋಷಕರನ್ನು ನಾನು ಗೌರವಿಸುತ್ತೇನೆ'' ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT