ದೇಶ

ಹೈದರಾಬಾದ್ ಇಸಿಸ್ ಮುಖ್ಯಸ್ಥ ಯಾಸಿರ್ ನಿಅಮಾತುಲ್ಲಾ ಬಂಧನ

Manjula VN

ನವದೆಹಲಿ: ಹೈದರಾಬಾದ್ ಇಸಿಸ್ ಮುಖ್ಯಸ್ಥ ಯಾಸಿರ್ ನಿಅಮಾತುಲ್ಲಾನನ್ನು ರಾಷ್ಟ್ರೀಯ ತನಿಖಾ ದಳದ(ಎನ್ಐಎ) ಅಧಿಕಾರಿಗಳು  ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತಂತೆ ತೆಲಂಗಾಣ ಗುಪ್ತಚರ ದಳ ಮಾಹಿತಿ ನೀಡಿದ್ದು, ಹೈದರಾಬಾದ್ ಇಸಿಸ್ ಮುಖ್ಯಸ್ಥನಾಗಿದ್ದ ಯಾಸಿರ್ ನಿಅಮಾತುಲ್ಲಾ ಮತ್ತು  ಉಗ್ರ ಸಂಘಟನೆಯಿಂದ ಪ್ರೇರಣೆಗೊಂಡು ವಿಧ್ವಂಸಕ ಕೃತ್ಯಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಅತಾಉಲ್ಲಾ ರೆಹ್ಮಾನ್ ಎಂಬುವವರನ್ನು ರಾಷ್ಟ್ರೀಯ ತನಿಖಾ ದಳ ಬಂಧನಕ್ಕೊಳಪಡಿಸಿದೆ ಎಂದು ಮಾಹಿತಿ ನೀಡಿದೆ. ಅಲ್ಲದೆ, ಶೀಘ್ರದಲ್ಲೇ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ಹೇಳಿದೆ.

ಇತ್ತೀಚೆಗಷ್ಟೇ ಇಸಿಸ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಐವರು ಶಂಕಿತರನ್ನು ಎನ್ಐಎ ಅಧಿಕಾರಿಗಳು ಹೈದರಾಬಾದ್ ನಲ್ಲಿ ಬಂಧನಕ್ಕೊಳಪಡಿಸಿದ್ದರು. ಇದರಂತೆ ಉಗ್ರರ ಪಿತೂರಿ ಹಾಗೂ ಯೋಜನೆಗಳನ್ನು ಬೆನ್ನಟ್ಟಿದ್ದ ಎನ್ಐಎ ಅಧಿಕಾರಿಗಳು ಇಂದು ಹೈದರಾಬಾದ್ ಇಸಿಸ್ ಮುಖ್ಯಸ್ಥ ಯಾಸಿರ್ ನಿಅಮಾತುಲ್ಲಾ ಹಾಗೂ ಅತಾಉಲ್ಲಾ ರೆಹ್ಮಾನ್ ರನ್ನು ಬಂಧಿಸಿದ್ದಾರೆ.

SCROLL FOR NEXT