ದೇಶ

ಸರ್ಕಾರಿ ನೌಕರಿಯಿಂದ ಸ್ವಯಂ ನಿವೃತ್ತಿ ಪಡೆದ ಕೇಜ್ರಿವಾಲ್ ಪತ್ನಿ

Shilpa D

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಇಂಡಿಯನ್ ರೆವೆನ್ಯೂ ಸರ್ವಿಸ್ (ಐಆರ್​ಎಸ್) ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುನಿತಾ ಕೇಜ್ರಿವಾಲ್ ವರ್ಷದ ಆರಂಭದಲ್ಲಿ ಸ್ವಯಂ ನಿವೃತ್ತಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಹಣಕಾಸು ಸಚಿವಾಲಯ ಮಂಗಳವಾರ ಅಧಿಕೃತವಾಗಿ ಸುನಿತಾ ವಿಲಿಯಮ್ಸ್  ಅವರನ್ನು ಸೇವೆಯಿಂದ ಬಿಡುಗಡೆ ಗೊಳಿಸಿದೆ.

ಹಣಕಾಸು ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುನಿತಾ ಕೇಜ್ರಿವಾಲ್ ಅವರನ್ನು 2016 ಜುಲೈ 15 ರಿಂದ ಅನ್ವಯವಾಗುವಂತೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಸುನಿತಾ ಕೇಜ್ರಿವಾಲ್ ಸ್ವಯಂ ನಿವೃತ್ತಿ ಪಡೆದಿದ್ದಾರೆ ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸುನಿತಾ ಕೇಜ್ರಿವಾಲ್ ಅವರು 1995ರಲ್ಲಿ ಐಆರ್​ಎಸ್ ಪಾಸ್ ಮಾಡಿ ಕೇಂದ್ರ ಸರ್ಕಾರಿ ಸೇವೆಗೆ ಸೇರಿದ್ದರು.

20 ವರ್ಷಗಳ ಸುನೀತಾ ಅವರು ಕೆಲಸ ಮಾಡಿರುವುದರಿಂದ ಅವರಿಗೆ ನಿವೃತ್ತಿ ವೇತನ ಸೇರಿದಂತೆ ಎಲ್ಲಾ ಸೌಲಭ್ಯಗಳು ಸಿಗಲಿವೆ. ಕೇಂದ್ರ ಸರ್ಕಾರ ಮತ್ತು ದೆಹಲಿಯ ಆಪ್ ಸರ್ಕಾರದ ನಡುವಿನ ಘರ್ಷಣೆಯಲ್ಲಿ. ಬಲಿಪಶು ಮಾಡಲಾಗುತ್ತದೆಂಬ ಭಯದಲ್ಲಿ ಸುನೀತ್ ಅವರು ವಿಆರ್ ಎಸ್ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT