ಅಸರಾಂ ಬಾಪೂ 
ದೇಶ

ಅಸರಾಂ ಬಾಪೂ ಪ್ರಕರಣ: ದಾಳಿಕೋರನನ್ನು ಹಾಜರುಪಡಿಸುವಂತೆ ನ್ಯಾಯಾಲಯ ಸೂಚನೆ

ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿದಾರನಿಗೆ ಗುಂಡಿಟ್ಟು ಹತ್ಯೆ ಮಾಡಿದ ಆರೋಪಿ ಕಾರ್ತಿಕ್ ಹಾಲ್ದರ್ ನನ್ನು ಬಂಧಿಸುವಲ್ಲಿ...

ಮುಜಾಫರ್ ನಗರ: ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿದಾರನಿಗೆ ಗುಂಡಿಟ್ಟು ಹತ್ಯೆ ಮಾಡಿದ ಆರೋಪಿ ಕಾರ್ತಿಕ್ ಹಾಲ್ದರ್ ನನ್ನು ಬಂಧಿಸುವಲ್ಲಿ ಗುಜರಾತ್ ಪೊಲೀಸರು ವಿಫಲವಾಗಿರುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಅಸರಾಂ ಬಾಪು ಪ್ರಕರಣ ಕುರಿತಂತೆ ಇಂದು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಗರಿಮಾ ಚೌಧರಿ ಅವರು, ಪ್ರಕರಣದಲ್ಲಿ ಕಾರ್ತಿಕ್ ಹಲ್ದಾರ್ ವಿಚಾರಣೆ ನಡೆಸುವುದು ಅಗತ್ಯವಿದ್ದು, ಶೀಘ್ರಗತಿಯಲ್ಲಿ ಕಾರ್ತಿಕ್ ಹಲ್ದಾರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಗುಜರಾತ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಸರಾಂ ಬಾಪು ಅವರನ್ನು ಬಂಧಿಸಲಾಗಿತ್ತು. ಅಖಿಲ್ ಗುಪ್ತಾ ಎಂಬುವವರು ಬಾಪು ಅವರ ಬಳಿ ಅಡುಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದರು. ಇವರನ್ನು ಪ್ರಕರಣದ ಪ್ರಮುಖ ಸಾಕ್ಷಿದಾರ ಎಂದು ಹೇಳಲಾಗುತ್ತಿತ್ತು. ಜನವರಿ 11 ರಂದು ಅಖಿಲ್ ಗುಪ್ತಾರಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Indian Stock Market: ರಕ್ತಾಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ನಷ್ಟ!

ಯುದ್ಧ ನಮ್ಮದಲ್ಲ: ಶಶಿತರೂರ್ ಬಳಿಕ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ಭಾರತ- ಪಾಕಿಸ್ತಾನದ ಸಂಘರ್ಷ ಅಣ್ವಸ್ತ್ರದ ಅಪಾಯದಲ್ಲೇ ಇದೆ, ಪಾಕ್ ನಿಂದ ನಮಗೂ ಅಪಾಯ ತಪ್ಪಿದ್ದಲ್ಲ: ಅಮೆರಿಕ

ಸಮುದ್ರದಲ್ಲೇ ಬಿಗ್ ಡೀಲ್‌: ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಭಾರತಕ್ಕೆ ಯು-ಟರ್ನ್!

ಪ್ರತಿ ವ್ಯಕ್ತಿ ತನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಹೇಳಲು ಬಯಸುವುದಿಲ್ಲ": ವಿವಾಹ ವದಂತಿಗೆ ಬಗ್ಗೆ ನಟಿ ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ...

SCROLL FOR NEXT