ನವದೆಹಲಿ: ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯನ್ನು ಹತ್ಯೆಗೈದ ಯೋಧರಿಗೆ ಹುತಾತ್ಮ ಕರ್ನಲ್ ಎಂ,ಎನ್ ರಾಯ್ ಅವರ ಮಗಳು ಅಲ್ಕಾ ಸಲಾಂ ಮಾಡಿದ್ದಾರೆ.
ಕರ್ನಲ್ ಎಂಎಸ್ ರಾಯ್ ಅವರ ಸಾವಿಗೆ ಕಾರಣನಾದ ಬುರ್ಹಾನ್ ವಾನಿ ಸಾವಿಗೆ ಕಾರಣನಾದ ಬುರ್ಹಾನ್ ವಾನಿಯನ್ನು ಹತ್ಯೆಗೈದ 19 ರಾಷ್ಟ್ರೀಯ ರೈಫಲ್ಸ್ ನ ಯೋಧರಿಗೆ ರಾಯ್ ಅವರ ಮಗಳು ನಮನ ಸಲ್ಲಿಸಿದ್ದು, ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಯಿದ್ದೀನ್ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ 42 ರಾಷ್ಟ್ರೀಯ ರೈಫಲ್ಸ್ ನ ಉನ್ನತ ಅಧಿಕಾರಿ ಎಂಎನ್ ರಾಯ್(39) ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪೇದೆ ಸಂಜೀವ್ ಕುಮಾರ್ ಹುತಾತ್ಮರಾಗಿದ್ದರು.