ಜಾಕಿರ್ ನಾಯಕ್ 
ದೇಶ

ಜಾಕಿರ್ ನಾಯಕ್ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ: ಶಿಯಾ ಪಂಥದ ಸಂಘಟನೆಯ ಘೋಷಣೆ!

ಮುಸ್ಲಿಂ ಸಮುದಾಯದ ಶಿಯಾ ಪಂಥದ ಸಂಘಟನೆಯೊಂದು ಜಾಕಿರ್ ನಾಯಕ್ ನನ್ನ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.

ಲಖನೌ: ಉಗ್ರರಿಗೆ ಸ್ಫೂರ್ತಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಮಾಧ್ಯಮಗಳು ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ತನಗೆ ಬೆಂಬಲ ನೀಡಬೇಕು ಎಂದು ಜಾಕಿರ್ ನಾಯಕ್ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದರು. ವಿಚಿತ್ರವೆಂದರೆ ಅದೇ ಮುಸ್ಲಿಂ ಸಮುದಾಯದ ಶಿಯಾ ಪಂಥದ ಸಂಘಟನೆಯೊಂದು ಜಾಕಿರ್ ನಾಯಕ್ ನನ್ನ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.

ಶಿಯಾ ಪಂಥದ ಹುಸೈನಿ ಟೈಗರ್ಸ್ ಎಂಬ ಸಂಘಟನೆ ಜಾಕಿರ್ ನಾಯಕ್ ನ್ನು ಖಳನಾಯಕ, ಕಾಫಿರ್ (ಮುಸ್ಲಿಮೇತರ) ವ್ಯಕ್ತಿಯಾಗಿದ್ದು, ಜಾಕಿರ್ ನಾಯಕ್ ನ ತಲೆ ಕಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ. ಜಾಕಿರ್ ನಾಯಕ್ ಪ್ರವಾದಿ ಮೊಹಮ್ಮದ್ ಗೆ ಅವಮಾನ ಮಾಡಿದ್ದಾರೆ. ಆತನೊಬ್ಬ ಖಳನಾಯಕನಾಗಿದ್ದು ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ನೀಡುತ್ತೇವೆ ಎಂದು  ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಹಾಗೂ ಪ್ರಮುಖ ಇಸ್ಲಾಮ್ ಧಾರ್ಮಿಕ ಮುಖಂಡ ಸಯೀದ್ ಕಾಲ್ಬೆ ಸಾದಿಕ್ ಅವರ ಪುತ್ರ  ಸಯೀದ್ ಕಲ್ಬೆ ಹುಸೈನ್ ನಖ್ವಿ ತಿಳಿಸಿದ್ದಾರೆ.

ಢಾಕಾದಲ್ಲಿ ದಾಳಿ ನಡೆಸಿದ ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿದ್ದರು ಎಂಬ ವರದಿಯಾಗಿದ್ದು, ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಇಸ್ಲಾಮ್ ಧಾರ್ಮಿಕ ಮುಖಂಡರು ಜಾಕಿರ್ ನಾಯಕ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!