ಮುಂಬೈ: ಸೌದಿ ಅರೇಬಿಯಾದಿಂದ ಭಾರತಕ್ಕೆ ವಾಪಸ್ಸಾಗುವುದನ್ನು ರದ್ದುಗೊಳಿಸಿರುವ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್, ಜು.14 ರಂದು ಸ್ಕೈಪ್ ಮೂಲಕ ಮುಂಬೈ ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಜು.14 ರಂದು ಮುಂಬೈಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಬೇಕಿದ್ದ ಜಾಕಿರ್ ನಾಯಕ್, ಭಾರತಕ್ಕೆ ವಾಪಸ್ಸಾಗುವ ನಿರ್ಧಾರವನ್ನು ಬದಲಾಯಿಸಿದ್ದು, ಬೆಳಿಗ್ಗೆ 11:30 ಕ್ಕೆ ಮುಂಬೈ ನ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ಸ್ಕೈಪ್ ಮೂಲಕ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಉಗ್ರರಿಗೆ ಸ್ಫೂರ್ತಿ ನೀಡುವಂತಹ ಭಾಷಣಗಳನ್ನು ಮಾಡಿರುವ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್, ಈ ಆರೋಪದ ಬಗ್ಗೆ ಚರ್ಚೆ ನಡೆಸಿದ ವೇಳೆ ತಮ್ಮ ಹೇಳಿಕೆಗಳನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಜಾಕಿರ್ ನಾಯಕ್ ಸಮರ್ಥಿಸಿಕೊಂಡಿದ್ದಾರೆ.
ಉಗ್ರರಿಗೆ ಸ್ಫೂರ್ತಿಯಾಗಿರುವ ಜಾಕಿರ್ ನಾಯಕ್ ವಿರುದ್ಧ ಕಠಿಣ ಕ್ರಮ ಜರುಗಿಸಲು ಚಿಂತನೆ ನಡೆಸುತ್ತಿದ್ದು, ಜಾಕಿರ್ ನಾಯಕ್ ಜು.14 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.