ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಅಳಿಯ ಅಶೋಕ್ ಪಟ್ನಾಯಕ್ ರನ್ನು ನ್ಯಾಷನಲ್ ಇಂಟಲಿಜೆನ್ಸ್ ಗ್ರಿಡ್(ಎನ್‌ಎಟಿಜಿಆರ್‌ಐಡಿ) ಸಿಇಒ ಆಗಿ ನೇಮಕ ಮಾಡಲಾಗಿದೆ.
1983ರ ಗುಜರಾತ್ ಬ್ಯಾಚ್ ಐಪಿಎಸ್ ಅಧಿಕಾರಿ ಅಶೋಕ್ ಪಟ್ನಾಯಕ್ ಸದ್ಯ ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಭಯೋತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸಲು ಮಹತ್ವಾಕಾಂಕ್ಷಿಯ ಗುಪ್ತಚರ ಜಾಲ ಯೋಜನೆಗೆ ಪಟ್ನಾಯಕ್ ಅವರನ್ನು ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಸಂಪುಟ ನೇಮಕಾತಿ ಸಚಿವಾಲಯ ಸ್ಪಷ್ಟಪಡಿಸಿದೆ.
26/11ರ ಮುಂಬೈ ದಾಳಿಯ ಬಳಿಕ ಅಂದಿನ ಕೇಂದ್ರ ಸರ್ಕಾರ ನ್ಯಾಟ್ ಗ್ರಿಡ್ ಅನ್ನು ರಚಿಸಿತ್ತು. ಕಾಂಗ್ರೆಸ್ ಸರ್ಕಾರದ ವೇಳೆ ರಚನೆಯಾಗಿದ್ದ ನ್ಯಾಟ್ ಗ್ರಿಡ್ ಗೆ ಪ್ರಸ್ತುತ ಎನ್ ಡಿಎ ಸರ್ಕಾರ ಕಾರ್ಯರೂಪಕ್ಕೆ ತರಲು ನಿರ್ಣಯಿಸಿದ್ದು, 2018. ಡಿಸೆಂಬರ್ 31ರಿಂದ ಅಧಿಕೃತವಾಗಿ ನ್ಯಾಟ್ ಗ್ರಿಡ್ ಕಾರ್ಯನಿರ್ವಹಿಸಲಿದೆ.
ನ್ಯಾಟ್ ಗ್ರಿಡ್ ದೇಶದ ರಕ್ಷಣೆಯ ವಿಷಯದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುತ್ತದೆ. ದೇಶದಲ್ಲಿ ಗುಪ್ತಚರಕ್ಕೆ ಸಂಬಂಧಿಸಿದಂತೆ 21 ಬಹುಮುಖ್ಯ ಸಂಸ್ಥೆಗಳಿವೆ. ಅಷ್ಟು ಸಂಸ್ಥೆಗಳಿಗೆ ಬರುವ ಮಾಹಿತಿ ಕೊನೆಗೆ ಶೇಕರವಾಗುವುದು ನ್ಯಾಟ್ ಗ್ರಿಡ್ ಸಂಸ್ಥೆಯಲ್ಲೇ ಅಷ್ಟೊಂದು ಪ್ರಮುಖ ಸ್ಥಾನವನ್ನು ಈ ಸಂಸ್ಥೆಗೆ ಕಲ್ಪಿಸಲಾಗಿದೆ.