ದೇಶ

ಜು.16ಕ್ಕೆ ಅರುಣಾಚಲ ಸಿಎಂ ನಬಮ್ ತುಕಿ ಬಹುಮತ ಸಾಬೀತು

Lingaraj Badiger
ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಹಿಂದುರುಗಿರುವ ನಬಮ್ ತುಕಿ ಅವರಿಗೆ ಜುಲೈ 16ಕ್ಕೆ ಬಹುಮತ ಸಾಬೀತು ಪಡಿಸುವಂತೆ ಅರುಣಾಚಲ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಲೈ 13ರ ಸುಪ್ರೀಂ ಕೋರ್ಟ್ ಆದೇಶದಂತೆ ನಬಮ್ ತುಕಿ ಅವರು ಅರುಣಾಚಲ ಸಿಎಂ ಆಗಿ ಮರುಸ್ಥಾಪಿತಗೊಂಡಿದ್ದು, ಶನಿವಾರ ಬಹುಮತ ಸಾಬೀತು ಪಡಿಸಲಿದ್ದಾರೆ ಎಂದು ರಾಜಭವನ ವಕ್ತಾರ ಅತುಮ್ ಪೊಟೊಮ್ ಅವರು ಹೇಳಿದ್ದಾರೆ.
ಕಾಂಗ್ರೆಸ್ ಬಂಡಾಯ ಶಾಸಕರ ಬೆಂಬಲದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದ ಕಲಿಖೋ ಪುಲ್ ನೇತೃತ್ವದ ಸರ್ಕಾರವನ್ನು ಅಸಾಂವಿಧಾನಿಕ ಎಂದಿರುವ ಸುಪ್ರೀಂ ಕೋರ್ಟ್, ಈ ಹಿಂದಿನ ಕಾಂಗ್ರೆಸ್ ನೇತೃತ್ವದ ನಬಮ್ ತುಕಿ ಸರ್ಕಾರವನ್ನು ಪುನರ್​ಸ್ಥಾಪಿಸುವಂತೆ ಆದೇಶ ನೀಡಿತ್ತು. ಅಲ್ಲದೆ ಜುಲೈ 16ರೊಳಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದೆ.
ಸುಪ್ರಿಂ ಕೋರ್ಟ್ ಆದೇಶದಂತೆ ಅರುಣಾಚಲ ಪ್ರದೇಶ ರಾಜ್ಯಪಾಲರು ಈಗಾಗಲೇ ನಬಮ್ ತುಕಿ ಅವರಿಗೆ ಶನಿವಾರದಂದು ಬಹುಮತ ಸಾಬೀತು ಪಡಿಸಲು ತಿಳಿಸಿದ್ದಾರೆ. ಅಲ್ಲದೇ ಈ ಪ್ರಕ್ರಿಯೆಯ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯ ಅರುಣಾಚಲ ಪ್ರದೇಶದ ರಾಜ್ಯಪಾಲ ಜೆ.ಪಿ. ರಾಜ್​ಖೋವಾ ಆಸ್ಪತ್ರೆಯಲ್ಲಿರುವ ಹಿನ್ನೆಲೆಯಲ್ಲಿ ತ್ರಿಪುರಾದ ರಾಜ್ಯಪಾಲ ತಥಾಗತ್ ರಾಯ್ ಅವರು ಹೆಚ್ಚುವರಿಯಾಗಿ ಈ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
SCROLL FOR NEXT