ದೇಶ

ಉಗ್ರ ವಾನಿಯೊಂದಿಗೆ ಹೋಲಿಕೆ: ಮಾಧ್ಯಮಗಳ ವಿರುದ್ಧ ಜಮ್ಮು-ಕಾಶ್ಮೀರದ ಐಎಎಸ್ ಅಧಿಕಾರಿ ಅಸಮಾಧಾನ

Srinivas Rao BV

ಶ್ರೀನಗರ: ತಮ್ಮನ್ನು ಉಗ್ರ ವಾನಿಯೊಂದಿಗೆ ಹೋಲಿಕೆ ಮಾಡಿದ ಮಾಧ್ಯಮಗಳ ವಿರುದ್ಧ 2009 ರಲ್ಲಿ ಯುಪಿಎಸ್ ಸಿ ಟಾಪರ್ ಆಗಿದ್ದ ಜಮ್ಮು-ಕಾಶ್ಮೀರದ ಐಎಎಸ್ ಅಧಿಕಾರಿ  ಶಾ ಫೈಸಲ್ ಅಸಮಾಧಾನ ವ್ಯಕ್ತಪಡಿಸಿ, ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಎನ್ ಕೌಂಟರ್ ಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಬುರ್ಹಾನ್ ಮುಜಾಫರ್ ವಾನಿಯೊಂದಿಗೆ ಅನಾವಶ್ಯಕವಾಗಿ ತಮ್ಮನ್ನು ಹೋಲಿಕೆ ಮಾಡಿ, ವಿವಾದದಲ್ಲಿ ಎಳೆದು ತರುತ್ತಿರುವ ರಾಷ್ಟ್ರೀಯ ಮಾಧ್ಯಮಗಳ ನಡೆಗೆ ಶಾ ಫೈಸಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಮಾಧ್ಯಮಗಳಲ್ಲಿ ವಾನಿಯ ಫೋಟೋ ಪಕ್ಕದಲ್ಲಿ ನನ್ನ ಫೋಟೋ ಪ್ರಸಾರ ಮಾಡಲಾಗುತ್ತಿದ್ದು, ಸಮಾಜದಲ್ಲಿ ಮತ್ತಷ್ಟು ದ್ವೇಷವನ್ನು ಹರಡಲು ಮಾಧ್ಯಮಗಳ ನಡೆ ಕಾರಣವಾಗುತ್ತಿದೆ.  ಕಾಶ್ಮೀರದಲ್ಲಿ ಗಲಭೆ ವಾತಾವರಣ ನಿರ್ಮಾಣವಾಗಿದ್ದರೆ, ಮಾಧ್ಯಮಗಳು ಕಾಶ್ಮೀರದ ಎರಡು ವೈರುಧ್ಯಗಳನ್ನು ತೋರಿಸಲು ನನ್ನ ಹಾಗೂ ಎನ್ ಕೌಂಟರ್ ಗೆ ಬಲಿಯಾದ ಉಗ್ರ ವಾನಿಯ ಫೋಟೋಗಳನ್ನು ಜೊತೆಯಲ್ಲಿಯೇ ಪ್ರಸಾರ ಮಾಡುತ್ತಿರುವುದು ಪ್ರಚೋದನಕಾರಿಯಾಗಲಿದೆ, ಇದು ಹೀಗೆ ಮುಂದುವರೆದರೆ ತಾವು ರಾಜೀನಾಮೆ ನೀಡುವುದಾಗಿ  ಜಮ್ಮು-ಕಾಶ್ಮೀರದ ಶಿಕ್ಷಣ ಇಲಾಖೆ ನಿರ್ದೇಶ ಶಾ ಫೈಸಲ್ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT